ದೇಶದಲ್ಲಿ ಕೊರೋನಾ ಇಲ್ವೇ ಇಲ್ಲ: ಬಿಜೆಪಿ ನಾಯಕನಿಂದ ಘೋಷಣೆ

masthmagaa.com:

ಪಶ್ಚಿಮ ಬಂಗಾಳ: ದೇಶದಲ್ಲಿ ಕೊರೋನಾ ವೈರಸ್ ದಿನಕ್ಕೊಂದು ದಾಖಲೆ ಬರೆಯುತ್ತಿರುವ ಹೊತ್ತಲ್ಲೇ ಬಿಜೆಪಿ ನಾಯಕರೊಬ್ಬರು ಕೊರೋನಾ ಹೋಗಿದೆ ಅಂತ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಾ ಪಕ್ಷಗಳು ಪ್ರಚಾರ ಆರಂಭಿಸಿವೆ.. ಇಂದು ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್​​​, ಕೊರೋನಾ ವೈರಸ್ ಸಂಪೂರ್ಣವಾಗಿ ಹೋಗಿದೆ. ಆದ್ರೆ ಮಮತಾ ಬ್ಯಾನರ್ಜಿ, ಸುತ್ತಲೂ ವೈರಸ್ ಇದೆ ಅಂತ ನಾಟಕವಾಡುತ್ತಿದ್ದು, ತಮ್ಮ ವೈಯಕ್ತಿಕ ಲಾಭಕ್ಕಾಗಿ ಲಾಕ್​ಡೌನ್ ಮಾಡ್ತಿದ್ದಾರೆ. ಈ ಮೂಲಕ ಬಿಜೆಪಿ ಸಮಾವೇಶಗಳನ್ನು ತಡೆಯುತ್ತಿದ್ದಾರೆ. ಆದ್ರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 45 ಲಕ್ಷದ ಗಡಿ ದಾಟಿದ್ದು, ಕಳೆದ 24 ಗಂಟೆಗಳಲ್ಲಿ 96,551 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.. ಅತ್ತ ಪಶ್ಚಿಮ ಬಂಗಾಳದಲ್ಲಿ 2 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ.. ಇಂತಹ ಹೊತ್ತಲ್ಲಿ ಬಿಜೆಪಿ ನಾಯಕನ ಈ ಹೇಳಿಕೆ ಟೀಕೆಗೆ ಗುರಿಯಾಗಿದೆ.

-masthmagaa.com

Contact Us for Advertisement

Leave a Reply