ಶಾಕಿಂಗ್ ವಿಡಿಯೋ: ಮೃತದೇಹಗಳ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ..!

masthmagaa.com:

ಮುಂಬೈ: ಕೊರೋನಾ ಆರ್ಭಟಕ್ಕೆ ದೇಶದ ವಿವಿಧ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಅದ್ರಲ್ಲೂ ಕಾಯಿಲೆಯ ಕೇಂದ್ರವಾಗಿರುವ ಮುಂಬೈನ ಆಸ್ಪತ್ರೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಮುಂಬೈನ ಸಿಯೋನ್ ಆಸ್ಪತ್ರೆ ಅಂತ ಹೇಳಲಾಗುತ್ತಿರುವ ಈ ವಿಡಿಯೋದಲ್ಲಿ, ಕೊರೋನಾ ಕಾಯಿಲೆಯಿಂದ ಮೃತಪಟ್ಟವರ ದೇಹಗಳನ್ನ ಕಪ್ಪು ಪ್ಲಾಸ್ಟಿಕ್​ನಲ್ಲಿ ಸುತ್ತಿಡಲಾಗಿದೆ. ಅದರ ಅಕ್ಕಪಕ್ಕದ ಬೆಡ್​ಗಳಲ್ಲಿ ಉಳಿದ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

57 ಸೆಕೆಂಡಿನ ಈ ವಿಡಿಯೋದಲ್ಲಿ ಒಟ್ಟು 7 ಮೃತದೇಹಗಳು ಕಂಡು ಬರುತ್ತಿವೆ. ಮೃತದೇಹಗಳನ್ನ ಪ್ಲಾಸ್ಟಿಕ್​ನಲ್ಲಿ ಸುತ್ತಿಡಲಾಗಿದ್ದರೂ ಪಕ್ಕದಲ್ಲೇ ಇರೋ ರೋಗಿಗಳಾಗಲಿ ಅಥವಾ ಅವರನ್ನ ನೋಡಲು ಬರುತ್ತಿರುವ ಕುಟುಂಬಸ್ಥರು ಮೃತದೇಹಗಳನ್ನು ನೋಡಿಯೂ ನೋಡದಂತೆ ಓಡಾಡುತ್ತಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಸಿಯೋನ್ ಆಸ್ಪತ್ರೆಯಲ್ಲಿ ಮೃತದೇಹಗಳ ಪಕ್ಕದಲ್ಲೇ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಯಾವ ರೀತಿಯ ಆಡಳಿತ.. ತುಂಬಾ ನಾಚಿಕೆಗೇಡಿನ ಸಂಗತಿ ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply