ಬಾಹ್ಯಾಕಾಶದಿಂದ ಬೋಯಿಂಗ್​​ ಇಂಟರ್​​ನೆಟ್: ಅಮೆರಿಕ ಗ್ರೀನ್ ಸಿಗ್ನಲ್

masthmagaa.com:

ಬಾಹ್ಯಾಕಾಶದಿಂದ ಇಂಟರ್​ನೆಟ್​ ಸಂಪರ್ಕ ಕಲ್ಪಿಸೋ ಬೋಯಿಂಗ್ ಕಂಪನಿಯ ಪ್ರಾಜೆಕ್ಟ್​​​ಗೆ ಅಮೆರಿಕದ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ದಿ ಫೆಡರಲ್ ಕಮ್ಯೂನಿಕೇಷನ್ ಕಮಿಷನ್, ಬೋಯಿಂಗ್ ಸಂಸ್ಥೆಗೆ ಬಾಹ್ಯಾಕಾಶದಲ್ಲಿ ನಿರ್ಮಾಣ, ನಿಯೋಜನೆ ಮತ್ತು ಕಾರ್ಯ ನಿರ್ವಹಿಸಲು ಲೈಸೆನ್ಸ್ ಕೊಡ್ತಿದ್ದೀವಿ. ಈ ಸಂಸ್ಥೆ ವಾಣಿಜ್ಯ, ಸಾಂಸ್ಥಿಕ, ಸರ್ಕಾರಿ ಮತ್ತು ವೃತ್ತಿಪರ ಬಳಕೆದಾರರಿಗೆ ಇಂಟರ್​ನೆಟ್ ಮತ್ತು ಸಂಹವನ ಸೇವೆಗಳನ್ನು ನೀಡಲಿದೆ ಅಂತ ತಿಳಿಸಿದೆ. ಅದರಂತೆ ಬೋಯಿಂಗ್ ಸಂಸ್ಥೆ 147 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಅದ್ರಲ್ಲಿ 132 ಬಾಹ್ಯಾಕಾಶದ ಕೆಳಕಕ್ಷೆಯಲ್ಲಿ ಸುತ್ತಲಿದೆ. ಅಂದ್ರೆ ಹೆಚ್ಚು ಕಡ್ಮೆ ಭೂಮಿಗಿಂತ 1000 ಕಿಲೋಮೀಟರ್ ಎತ್ತರದಲ್ಲಿ ಭೂಮಿಗೆ ಸುತ್ತು ಹೊಡೆಯಲಿದೆ. ಅದೇ ರೀತಿ ಉಳಿದ 15 ಉಪಗ್ರಹಗಳನ್ನು 27ರಿಂದ 43 ಸಾವಿರ ಕಿಲೋಮೀಟರ್​​ ಎತ್ತರದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ.

-masthmagaa.com

Contact Us for Advertisement

Leave a Reply