ಮುಂಬೈ ನವ ಆ್ಯಪಲ್ ಸ್ಟೋರ್ ಲಾಂಚ್ ಗೆ ಮೆರುಗು ತಂಡ ಬಾಲಿವುಡ್ ಸೆಲೆಬ್ರಿಟಿಗಳು!

masthmagaa.com:

ಇಂದು ಮುಂಬೈನಲ್ಲಿ ಹೊಸ ಆಪಲ್‌ ಸ್ಟೋರ್‌ ಒಪನ್‌ ಆಗಿದೆ. ಭಾರತದ ಮೊದಲ ಆಪಲ್ ಸ್ಟೋರ್‌ಗೆ ಕಸ್ಟಮರ್ಸ್‌ಗಳನ್ನ ವೆಲ್‌ಕಮ್‌ ಮಾಡೋಕೆ ಆಪಲ್‌ ಕಂಪನಿಯ ಸಿಇಒ ಉತ್ಸುಕರಾಗಿದ್ದಾರೆ. ಈ ಒಪನಿಂಗ್‌ ಸೆರಮನಿಯಲ್ಲಿ ಭಾಗವಹಿಸೋಕೆ ಬಾಲಿವುಡ್‌ ಆಕ್ಟರ್ಸ್‌ಗಳಿಗೂ ಆಹ್ವಾನವಿತ್ತು.

ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಪಲ್‌ ಸ್ಟೋರ್ಸ್‌ ಒಪನಿಂಗ್‌ನಲ್ಲಿ ಭಾಗವಹಿಸಿದ ಫೋಟೊಗಳನ್ನ ಶೇರ್‌ ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಹಾಗೂ ಅವರ ಪತಿ ಸೂರಜ್ ನಂಬಿಯಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತಿಯ ಜೊತೆಗಿನ ಫೋಟೊಗಳನ್ನ ಶೇರ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಇನ್ನೂ ಬೋನಿ ಕಪೂರ್‌ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿ ಫೋಟೊಗಳನ್ನ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೋನಿ ಕಪೂರ್‌ ಶೇರ್‌ ಮಾಡಿದ ಈ ಫೋಟೊದಲ್ಲಿ, “ಮುಂಬೈನಲ್ಲಿ ಆಪಲ್ ಸ್ಟೋರ್ ಉದ್ಘಾಟನೆ,” ಎಂಬ ಟೈಟಲ್‌ ಕೂಡ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply