masthmagaa.com:

ದೆಹಲಿ: ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರೋ ಕೋವ್ಯಾಕ್ಸಿನ್ ಸ್ವದೇಶಿ ಲಸಿಕೆ.. ಇದು ಹೆಮ್ಮೆಯ ವಿಚಾರ ಅಂತ ಕೇಂದ್ರ ಸರ್ಕಾರ ಹೇಳ್ತಿದ್ರೆ, ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು 3ನೇ ಹಂತ ಪೂರ್ಣಗೊಳಿಸದ ಕೋವ್ಯಾಕ್ಸಿನ್​​​​ಗೆ ಅನುಮತಿ ನೀಡಿರೋದು ಅಪಾಯಕಾರಿ ಅಂತ ಹೇಳ್ತಿದ್ಧಾರೆ. ಈ ನಡುವೆ ಬ್ರೆಜಿಲ್ ಮೂಲದ ಖಾಸಗಿ ಕಂಪನಿಯೊಂದು ಭಾರತ್ ಬಯೋಟೆಕ್​​ನ 50 ಲಕ್ಷ ಡೋಸ್​​ ಲಸಿಕೆ ಖರೀದಿಗೆ ಮುಂದಾಗಿದೆ.

ಬ್ರೆಜಿಲ್ ಮೂಲದ ಖಾಸಗಿ ಸಂಸ್ಥೆಯಾದ ದಿ ಬ್ರೆಜಿಲಿಯನ್ ಅಸೋಸಿಯೇಷನ್ ಆಫ್ ವ್ಯಾಕ್ಸಿನ್ ಕ್ಲಿನಿಕ್ಸ್​ ಭಾರತ್ ಬಯೋಟೆಕ್ ಜೊತೆಗೆ ಮಾತುಕತೆ ನಡೆಸಿದೆ. ಅಲ್ಲದೆ ಈ ಬಗ್ಗೆ ತನ್ನ ಅಧಿಕೃತ ವೆಬ್​ಸೈಟ್​​ನಲ್ಲಿ ಸ್ಪಷ್ಟಪಡಿಸಿರುವ ಸಂಸ್ಥೆ, ಭಾರತ್ ಬಯೋಟೆಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರೋದಾಗಿ ಮಾಹಿತಿ ನೀಡಿದೆ. ಬ್ರೆಜಿಲ್​​ನ ಆರೋಗ್ಯ ನಿಯಂತ್ರಕ ಸಂಸ್ಥೆ ಒಪ್ಪಿಗೆ ನೀಡಿದ ಬಳಿಕ ಈ ಒಪ್ಪಂದ ಫೈನಲ್ ಆಗಲಿದೆ.. ಆದ್ರೆ ಬ್ರೆಜಿಲ್ ಈವರೆಗೆ ಯಾವುದೇ ಕೊರೋನಾ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ.

ಅಮೆರಿಕ ಬಳಿಕ ಅತಿ ಹೆಚ್ಚು ಮಂದಿ ಬ್ರೆಜಿಲ್​​ನಲ್ಲಿ ಸಾವನ್ನಪ್ಪಿದ್ದಾರೆ. ಆದ್ರೂ ಕೂಡ ಅಧ್ಯಕ್ಷ ಜೈರ್ ಬೋಲ್ಸೊನಾರೋ ಅವರ ಸರ್ಕಾರ ಈವರೆಗೆ ಯಾವುದೇ ಕೊರೋನಾ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಇದೆ.

-masthmagaa.com

Contact Us for Advertisement

Leave a Reply