ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿ!? ಕೈ ಜೊತೆ ಟು ಟು ಎಂದ ಬಿಟಿಪಿ

masthmagaa.com:

ರಾಜಸ್ಥಾನ: ಅಶೋಕ್ ಗೆಹ್ಲೋಟ್​​​​ ಸರ್ಕಾರಕ್ಕೆ ಒಂದರ ನಂತರ ಒಂದರಂತೆ ಸಂಕಟ ಎದುರಾಗುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಪಕ್ಷದ ನಾಯಕ ಸಚಿನ್ ಪೈಲಟ್ ಬೇಸರಗೊಂಡಿದ್ರು. ಇದೀಗ ಕಾಂಗ್ರೆಸ್ ಮಿತ್ರ ಪಕ್ಷ ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ) ಕೂಡ ಮೈತ್ರಿ ಮುರಿದುಕೊಳ್ಳುವ ಮಾತಾಡಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಿಲ್ಲಾ ಪರಿಷದ್ ಮತ್ತು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದೆ. ಹೀಗಾಗಿ ನಾವು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳುತ್ತೇವೆ ಅಂತ ಹೇಳಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಡೂಂಗರ್​​ಪುರ ಜಿಲ್ಲಾ ಪರಿಷತ್​​ ಮತ್ತು ಪಂಚಾಯ್ತಿಯಲ್ಲಿ ಗದ್ದುಗೆ ಏರಲು ಸಾಧ್ಯವಾಗಲಿಲ್ಲ.. ಡೂಂಗರ್​​ಪುರ ಜಿಲ್ಲಾ ಪರಿಷತ್​​​ನ 27 ಸೀಟುಗಳ ಪೈಕಿ ಬಿಟಿಪಿ 13ರಲ್ಲಿ ಗೆದ್ದರೂ, ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ನಾವು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುತ್ತಿದ್ದೇವೆ. ಸದ್ಯದಲ್ಲೇ ಔಪಚಾರಿಕವಾಗಿ ಈ ಬಗ್ಗೆ ಘೋಷಣೆ ಮಾಡಲಾಗುತ್ತೆ ಎಂದಿದ್ದಾರೆ.

ಬಿಟಿಪಿಯ ಇಬ್ಬರು ಎಂಎಲ್​ಎಗಳು ಹೊರಬಂದ್ರೆ ಸರ್ಕಾರವೇನೂ ಬಿದ್ದು ಹೋಗಲ್ಲ.. ಆದ್ರೂ ಕೂಡ ಕಾಂಗ್ರೆಸ್​​​​​ನ ಸಂಖ್ಯಾಬಲ ಕಡಿಮೆಯಾಗುತ್ತೆ ಅಷ್ಟೆ..

-masthmagaa.com

Contact Us for Advertisement

Leave a Reply