32 ಕುಟುಂಬಗಳಿದ್ದ ಕಟ್ಟಡದಲ್ಲಿ ಬಿರುಕು! ಜನರ ಸ್ಥಳಾಂತರ

masthmagaa.com:

ಬೆಂಗಳೂರಿನ ಬಿನ್ನಿ ಮಿಲ್ಸ್‌ನಲ್ಲಿರುವ ಮೂರು ವರ್ಷದ ಹಳೆಯ ಕಟ್ಟಡ ವೊಂದರ ಬೇಸ್‌ ಮೆಂಟ್‌ನಲ್ಲಿ ಬಿರುಕುಗಳು ಹೆಚ್ಚಾಗಿದೆ. ಹಾಗೆ ಸ್ವಲ್ಪ ಕಟ್ಟಡ ವಾಲಿದೆ. ಹೀಗಾಗಿ ಕುಸಿದು ಬೀಳುವ ಅಪಾಯ ಇರೋದ್ರಿಂದ ಕಟ್ಟಡದಲ್ಲಿದ್ದ 32 ಪೊಲೀಸ್‌ ಸಿಬ್ಬಂದಿಯ ಕುಟುಂಬಗಳನ್ನು ನಾಗರಭಾವಿಯಲ್ಲಿರೋ ಹೊಸ ಪೊಲೀಸ್ ಕ್ವಾರ್ಟಸ್​​​​ಗೆ ಸ್ಥಳಾಂತರ ಮಾಡಲಾಗಿದೆ. ಇದು ಏಳು ಅಂತಸ್ತಿನ ಕಟ್ಟಡವಾಗಿದ್ದು, ಇದು ಅಷ್ಟೇನೂ ಹಳೆಯ ಕಟ್ಟಡ ಅಲ್ಲ.. ಆದ್ರೂ ಕೂಡ ಕುಸಿಯೋ ಭೀತಿ ಎದುರಾಗಿದೆ. ಇತ್ತೀಚೆಗೆ ಬೆಂಗಳೂರಲ್ಲಿ ಇಂತಾ ಪ್ರಕರಣ ಜಾಸ್ತಿಯಾಗ್ತಿದ್ದು, ಅದಕ್ಕೆ ಮಳೆಯೇ ಕಾರಣ ಎನ್ನಲಾಗ್ತಿದೆ. ಜೊತೆಗೆ ಈಗಾಗಲೇ ಬಿಬಿಎಂಪಿ 300 ಮನೆಗಳನ್ನು ಗುರುತಿಸಿದ್ದು, ಅವುಗಳ ನೆಲಸಮಕ್ಕೆ ಆಯಾ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

-masthmagaa.com

Contact Us for Advertisement

Leave a Reply