masthmagaa.com:

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ. ರಾಮ ರಾವ್ ತೆಲಂಗಾಣದ ಮುಂದಿನ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಬಗ್ಗೆ ಆಡಳಿತ ಪಕ್ಷದ ನಾಯಕರೇ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ತೆಲಂಗಾಣ ಪಶುಸಂಗೋಪನಾ ಸಚಿವ ಶ್ರೀನಿವಾಸ್ ಯಾದವ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಕೆ.ಟಿ. ರಾಮ ರಾವ್ ತೆಲಂಗಾಣ ಸಿಎಂ ಆದ್ರೆ ಏನೂ ತಪ್ಪಿಲ್ಲ ಎಂದಿದ್ದಾರೆ. ಟಿಆರ್​ಎಸ್​ ಶಾಸಕ ಶಕೀಲ್ ಅಹ್ಮದ್ ಮಾತನಾಡಿ, ಕೆಸಿಆರ್ ನೇತೃತ್ವದಲ್ಲಿ ತೆಲಂಗಾಣ ಪ್ರಗತಿ ಕಾಣ್ತಿದೆ. ಕೆಟಿಆರ್ ಸಿಎಂ ಆದ್ರೆ ಮತ್ತಷ್ಟು ಅಭಿವೃದ್ಧಿ ಹೊಂದುತ್ತೆ. ಯುವ ಪೀಳಿಗೆಗೆ ಹೆಚ್ಚಿನ ಅವಕಾಶ ಸಿಗುತ್ತೆ ಅಂತ ಹೇಳಿದ್ದಾರೆ. ಆಡಳಿತದ ಪಕ್ಷದ ನಾಯಕರಿಬ್ಬರು ಕೆಟಿಆರ್ ಸಿಎಂ ಆಗುವ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದು ಇದೇ ಮೊದಲು.

ತೆಲಂಗಾಣ ಸರ್ಕಾರದಲ್ಲಿ ಸಚಿವರಾಗಿರುವ 44 ವರ್ಷದ ಕೆಟಿಆರ್ ಟಿಆರ್​ಎಸ್ ಪಕ್ಷದ ಕಾರ್ಯಾಧ್ಯಕ್ಷರು ಕೂಡ ಹೌದು. ಅಂದ್ಹಾಗೆ ಕೆ.ಟಿ. ರಾಮ ರಾವ್ ತೆಲಂಗಾಣ ಸಿಎಂ ಆಗಬೇಕೆನ್ನುವ ಗುಸುಗುಸು ಪಿಸುಪಿಸು 2018ರಿಂದಲೇ ಪ್ರಾರಂಭವಾಗಿತ್ತು. 2018ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ಮುಗಿದ ಬಳಿಕ, ಸಂಯುಕ್ತ ರಂಗವನ್ನ ರಚಿಸುವ ಬಗ್ಗೆ ಕೆ. ಚಂದ್ರಶೇಖರ್ ರಾವ್ ಮಾತನಾಡಿದ್ರು. ಅಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ತಾವು ದೊಡ್ಡ ರೋಲ್ ಪ್ಲೇ ಮಾಡಬೇಕಿದೆ ಅಂತ ಹೇಳಿದ್ರು. ಇದಾದ ಬಳಿಕ ಸಿಎಂ ಕುರ್ಚಿಗೆ ಅವರ ಮಗನ​ ಹೆಸರು ಕೇಳಿ ಬಂತು. ಆದ್ರೆ ಚಂದ್ರಶೇಖರ್ ರಾವ್​ ಈಗಲೇ ಸಿಎಂ ಹುದ್ದೆ ಬಿಟ್ಟುಕೊಡ್ತಾರಾ ಅಥವಾ 2023ರ ಚುನಾವಣೆ ಬಳಿಕನಾ ಅನ್ನೋದು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply