ಡ್ರೋನ್ ರೂಲ್ಸ್ ಮತ್ತಷ್ಟು ಸರಾಗಗೊಳಿಸಿದ ಕೇಂದ್ರ ಸರ್ಕಾರ!

masthmagaa.com:

ದೇಶದಲ್ಲಿ ಡ್ರೋನ್ ಹಾರಿಸೋ ರೂಲ್ಸನ್ನು ಕೇಂದ್ರ ಸರ್ಕಾರ ಮತ್ತಷ್ಟು ಸರಾಗಗೊಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ ಡ್ರೋನ್ ಹಾರಿಸಲು ಪರ್ಮೀಷನ್ ಪಡೆದುಕೊಳ್ಳಲು ಬೇಕಾದ ಫಾರಂಗಳ ಸಂಖ್ಯೆಯನ್ನು 25ರಿಂದ 5ಕ್ಕೆ ಇಳಿಸಿದೆ. ಜೊತೆಗೆ ಒಟ್ಟು 72 ಬಗೆಯ ಶುಲ್ಕವನ್ನು ಕಡಿಮೆ ಮಾಡಿ, 4 ರೀತಿಯ ಶುಲ್ಕಕ್ಕೆ ಇಳಿಸಿದೆ. ಸಚಿವಾಲಯದಿಂದ ಡ್ರೋನ್ ರೂಲ್ಸ್​ Unmanned Aircraft System (UAS) Rules, 2021ರಲ್ಲಿ ಈ ರೀತಿಯ ವಿನಾಯಿತಿಗಳನ್ನು ನೀಡಲಾಗಿದೆ. ಇದ್ರ ಪ್ರಕಾರ ರಿಜಿಸ್ಟ್ರೇಷನ್​​ಗೂ ಮುನ್ನ ಸೆಕ್ಯೂರಿಟಿ ಕ್ಲಿಯರೆನ್ಸ್ ಪಡೆಯೋ ಅಗತ್ಯತೆ ಕೂಡ ಇಲ್ಲ. ಡ್ರೋನ್ ಹಾರಿಸಲು ವಿಧಿಸಲಾಗೊ ಚಾರ್ಜ್​​​​​ನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದ್ದು, ಈ ಚಾರ್ಜ್​ಗೂ ಡ್ರೋನ್​ಗೂ ಯಾವುದೇ ಸಂಬಂಧ ಇಲ್ಲ ಅಂತ ಕೂಡ ಹೇಳಲಾಗಿದೆ. ಹೀಗೆ ಪಡೆಯೋ ಪರ್ಮಿಷನ್ ಅಥವಾ ಲೈಸೆನ್ಸ್ 10 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತೆ.. ಅಂದಹಾಗೆ ಹೊಸ ರೂಲ್ಸ್​ನಲ್ಲಿ ಡ್ರೋನ್ ಲೈಸೆನ್ಸ್ ರದ್ದುಪಡಿಸೋದು ಅಥವಾ ಟ್ರಾನ್ಸ್​​ಫರ್ ಮಾಡಿಸೋ ಪ್ರಕ್ರಿಯೆಯನ್ನು ಕೂಡ ಸರಳಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply