masthmagaa.com:

ಇತ್ತೀಚೆಗೆ ಭಾರತದಿಂದ ಆಮದು ಮಾಡಿಕೊಂಡ ಮೀನಿನ ಪ್ಯಾಕೆಟ್​ನಲ್ಲಿ ಕೊರೋನಾ ವೈರಾಣು ಇತ್ತು ಅಂತ ಹೇಳಿದ್ದ ಚೀನಾ ಇದೀಗ ಬ್ರೆಜಿಲ್, ನ್ಯೂಜಿಲ್ಯಾಂಡ್, ಬೊಲಿವಿಯಾ ಮುಂತಾದ ದೇಶಗಳಿಂದ ತರಿಸಿಕೊಂಡ ದನದ ಮಾಂಸ ಮತ್ತು ಅದರ ಪ್ಯಾಕೇಜಿಂಗ್​ನಲ್ಲೂ ವೈರಾಣು ಕಾಣಿಸಿಕೊಂಡಿದೆ ಅಂತ ಹೇಳಿದೆ. ಜೊತೆಗೆ ಸುಮಾರು 7,500ಕ್ಕೂ ಹೆಚ್ಚು ಜನ ಈ ಮಾಂಸದ ಪ್ಯಾಕೆಟ್​ನ ಸಂಪರ್ಕಕ್ಕೆ ಬಂದಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಪದೇಪದೆ ಇಂತಹ ಪ್ರಕರಣಗಳು ಬೆಳಕಿಗೆ ಬರ್ತಿರೋ ಬೆನ್ನಲ್ಲೇ ಅಲರ್ಟ್​ ಆಗಿರೋ ಚೀನಾ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಕೊರೋನಾ ಪರೀಕ್ಷೆಗಳನ್ನ ಹೆಚ್ಚಿಸಿದೆ. ಜಗತ್ತಿನಲ್ಲಿ ಅತಿ ಹೆಚ್ಚು ದನದ ಮಾಂಸವನ್ನು ಆಮದು ಮಾಡಿಕೊಳ್ಳುವ ದೇಶ ಚೀನಾ. ಚೀನಾಗೆ ಆ ಮಾಂಸವನ್ನು ಅತಿ ಹೆಚ್ಚು ರಫ್ತು ಮಾಡುವ ದೇಶಗಳಂದ್ರೆ ಬ್ರೆಜಿಲ್ ಮತ್ತು ಅರ್ಜೆಂಟೀನಾ.

-masthmagaa.com

Contact Us for Advertisement

Leave a Reply