masthmagaa.com:

ಆರಂಭದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದ ಚೀನಾದಲ್ಲಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇದರ ಹಿಂದೆ ಎರಡು ವಾದಗಳಿವೆ. ಮೊದಲನೇದು ಕೊರೋನಾ ನಂಬರ್ಸ್​ ಬಗ್ಗೆ ಚೀನಾ ಸುಳ್ಳು ಹೇಳ್ತಿದೆ. ಜಾಸ್ತಿ ಸೋಂಕಿತರು ಪತ್ತೆಯಾದ್ರೂ ಕಮ್ಮಿ ತೋರಿಸ್ತಿದೆ ಅನ್ನೋ ವಾದ. ಆರಂಭದಲ್ಲಿ ಈ ವಾದಕ್ಕೆ ಪುಷ್ಟಿ ನೀಡುವಂತಹ ಕೆಲವೊಂದು ವಿಚಾರಗಳು ಬೆಳಕಿಗೆ ಬಂದರೂ ಎಷ್ಟುದಿನಗಳ ಕಾಲ ಸುಳ್ಳು ಹೇಳ್ಕೊಂಡು ಇರೋಕೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತೆ. ಈಗ ಎರಡನೇ ವಾದಕ್ಕೆ ಬರೋಣ.. ಇದರ ಪ್ರಕಾರ ಸಮಯಪ್ರಜ್ಞೆ ಮತ್ತು ಕಠಿಣ ನಿಯಮಗಳಿಂದಾನೇ ಕೊರೋನಾ ಸೋಂಕನ್ನು ಚೀನಾ ಚೆನ್ನಾಗಿ ಕಂಟ್ರೋಲ್ ಮಾಡಿದೆ ಅನ್ನೋದು. ಈ ವಾದಕ್ಕೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ಬೆಳಕಿಗೆ ಬರ್ತಿವೆ. ಚೀನಾದಲ್ಲಿ ಕಳೆದ ಕೆಲದಿನಗಳಿಂದ ಒಂದೊಂದೇ ಲೋಕಲ್ ಕೊರೋನಾ ಕೇಸಸ್ ಪತ್ತೆಯಾಗ್ತಿದೆ. ಒಂದು ಪಾಸಿಟಿವ್ ಪ್ರಕರಣ ವರದಿಯಾದ್ರೂ ಆ ಏರಿಯಾದ ಶಾಲೆ, ಆಸ್ಪತ್ರೆ, ಕಚೇರಿ, ಜನವಸತಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶವನ್ನ ಸಂಪೂರ್ಣವಾಗಿ ಲಾಕ್​ಡೌನ್ ಮಾಡಲಾಗುತ್ತೆ. ಬಳಿಕ ಆ ಏರಿಯಾದ ಎಲ್ಲರಿಗೂ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಹಾಗಂತ ತಿಂಗಳುಗಟ್ಟಲೇ ಪರೀಕ್ಷೆ ಮಾಡ್ತಾ ಕೂರಲ್ಲ. ಎರಡ್ಮೂರು ದಿನ, ಹೆಚ್ಚಂದ್ರೆ ಒಂದು ವಾರದಲ್ಲಿ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿ ಮುಗಿಸಲಾಗುತ್ತೆ. ಇತ್ತೀಚೆಗೆ ಚೀನಾದ ಟಿಯಾಂಜಿನ್​ನಲ್ಲಿ 5 ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆ ಅಲ್ಲಿನ ಅಂಗನವಾಡಿಯನ್ನ ಬಂದ್ ಮಾಡಿ ಎಲ್ಲಾ ಮಕ್ಕಳು, ಶಿಕ್ಷಕರು ಮತ್ತು ಅವರ ಕುಟುಂಬದವರನ್ನ ಸೀದಾ ಕ್ವಾರಂಟೈನ್​ ಕೇಂದ್ರಕ್ಕೆ ಶಿಫ್ಟ್ ಮಾಡಲಾಯ್ತು. ಇನ್ನು ಪುಡಾಂಗ್ ಏರ್​ಪೋರ್ಟ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಆಕೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಉದ್ಯೋಗಿಗಳನ್ನ ಕಚೇರಿಯಲ್ಲೇ ಕ್ವಾರಂಟೈನ್ ಮಾಡಲಾಯ್ತು. ಅದು ಕೂಡ ಬರೋಬ್ಬರಿ 4 ದಿನಗಳ ಕಾಲ. ಊಟ, ತಿಂಡಿ ಎಲ್ಲವೂ ಅಲ್ಲೇ. ಅದಾದ ಬಳಿಕ ಮನೆಯಲ್ಲಿ 2 ವಾರಗಳ ಕಾಲ ಕ್ವಾರಂಟೈನ್​ಗೆ ಒಳಪಡುತ್ತೇನೆ ಎಂಬ ಮುಚ್ಚಳಿಕೆ ಬರೆಸಿಕೊಂಡ ನಂತರವಷ್ಟೇ ಅವರನ್ನ ಬಿಡಲಾಯ್ತು ಅಂತ ಕಂಪನಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಹೀಗೆ ಒಂದು ಲೋಕಲ್ ಕೇಸ್ ವರದಿಯಾದ್ರೂ ಅಧಿಕಾರಿಗಳು ತಕ್ಷಣ ಅಲರ್ಟ್ ಆಗ್ತಾರೆ, ಕಠಿಣ ಕ್ರಮಗಳನ್ನ ಜಾರಿಗೆ ತರ್ತಾರೆ, ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ಮಾಡ್ತಾರೆ. ಈ ಮೂಲಕವೇ ಚೀನಾ ಕೊರೋನಾ ಕಂಟ್ರೋಲ್ ಮಾಡ್ತು ಅನ್ನೋದು ಕೆಲವರ ವಾದ.

-masthmagaa.com

Contact Us for Advertisement

Leave a Reply