ʻಅರುಣಾಚಲ ಪ್ರದೇಶʼ ನಮ್ಮದೆಂದ ಚೀನಾಗೆ ಭಾರತ ತಿರುಗೇಟು!

masthmagaa.com:

ಮಾರ್ಚ್‌ 09 ರಂದು ಅರುಣಾಚಲ ಪ್ರದೇಶಕ್ಕೆ ಪಿಎಂ ನರೇಂದ್ರ ಮೋದಿಯವ್ರು ಭೇಟಿ ನೀಡಿದ್ರು. ಟನಲ್‌ಗಳನ್ನ ಉದ್ಘಾಟನೆ ಮಾಡಿದ್ರು. ಆದ್ರೆ ಈ ವಿಚಾರಕ್ಕೂ ಚೀನಾ ಮುನಿಸಿಕೊಂಡಿದೆ. ಮೋದಿಯವ್ರ ಭೇಟಿಗೆ ಪ್ರತಿರೋಧವನ್ನ ವ್ಯಕ್ತಪಡಿಸಿದೆ..ʻಭಾರತದ ಪ್ರಧಾನಿ ಅರುಣಾಚಲ ಪ್ರದೇಶಕ್ಕೆ ಹೋಗಿರೋದನ್ನ ನಾವು ಸಹಿಸಲ್ಲ. ಭಾರತದ ಈ ನಡೆಯಿಂದ ಭಾರತ-ಚೀನಾ ಗಡಿ ಸಮಸ್ಯೆ ಇನ್ನಷ್ಟು ಹೆಚ್ಚು ಆಗುತ್ತೆ ಅಂತ ಚೀನಾ ಬಾಯಿ ಬಡಿದುಕೊಂಡಿದೆ. ಜೊತೆಗೆ ʻಅಲ್ಲಿನ ಜಂಗ್ನಾನ್‌ ಪ್ರದೇಶವು ಚೀನಾದ ಟೆರಿಟರಿ. ಭಾರತ ಕಾನೂನುಬಾಹಿರವಾಗಿ ಅದನ್ನ ʻಅರುಣಾಚಲ ಪ್ರದೇಶ ಅಂತ ಮಾಡಿಕೊಂಡಿದೆʼ ಚೀನಾ ಅದನ್ನ ಪರಿಗಣಿಸಲ್ಲ. ಜಂಗ್ನಾನ್‌ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ನಡೆಸೋಕೆ ಭಾರತಕ್ಕೆ ಹಕ್ಕಿಲ್ಲ. ಇಲ್ಲಿಗೆ ಭಾರತದ ನಾಯಕರು ಭೇಟಿ ನೀಡೋದನ್ನ ಚೀನಾ ತೀವ್ರವಾಗಿ ಖಂಡಿಸುತ್ತೆʼ ಅಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾನ್‌ ವೆನ್ಬಿನ್‌ ಹೇಳಿದ್ದಾರೆ. ಇನ್ನು ಚೀನಾದ ಈ ಉದ್ದಟತನದ ಹೇಳಿಕೆಗೆ ಭಾರತ ತಕ್ಕ ಉತ್ತರ ನೀಡಿದೆ. ಭಾರತೀಯ ನಾಯಕರು ಬೇರೆ ರಾಜ್ಯಗಳಿಗೆ ಭೇಟಿ ನೀಡಿದಂತೆ…ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡ್ತಾರೆ. ಚೀನಾ ಈ ರೀತಿ ಹೇಳಿಕೆ ನೀಡಿರೋದು ಅಸಂಬದ್ಧ ಅಂತ ಕರೆದಿದೆ. ಜೊತೆಗೆ ʻಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಚೀನಾ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಚೀನಾ ಅರುಣಾಚಲ ಪ್ರದೇಶದ ಬಗ್ಗೆ ಈ ರೀತಿ ಕಮೆಂಟ್‌ ಮಾಡೋದನ್ನ ಭಾರತ ರಿಜೆಕ್ಟ್‌ ಮಾಡುತ್ತೆʼ ಅಂತ ಭಾರತೀಯ ವಿದೇಶಾಂಗ ಕಚೇರಿ ತಿರುಗೇಟು ನೀಡಿದೆ.

-masthmagaa.com

Contact Us for Advertisement

Leave a Reply