ಮತ್ತೆ ಪಾಕ್‌ ಬೆನ್ನಿಗೆ ನಿಂತು ಭಾರತವನ್ನ ವಿರೋಧಿಸಿದ ಚೀನಾ!

masthmagaa.com:

ಇತ್ತೀಚಿಗಷ್ಟೇ ವಿಶ್ವಸಂಸ್ಥೆಯಲ್ಲಿ ಭಾರತ ಅಚ್ಚರಿ ರೀತಿಯಲ್ಲಿ ಚೀನಾಗೆ ಬೆಂಬಲ ವ್ಯಕ್ತಪಡಿಸಿತ್ತು. ಜಾಗತಿಕ ಮಟ್ಟದಲ್ಲಿ ಚೀನಾಗೆ ಪ್ರತಿಷ್ಠೆಯ ವಿಷಯವಾಗಿರೊ ಶಿನ್‌ಜಿಯಾಂಗ್‌ ಪ್ರಾಂತ್ಯದ ಮಾನವ ಹಕ್ಕುಗಳ ಮ್ಯಾಟರ್‌ನಿಂದ ಭಾರತ ಅಂತರ ಕಾಯ್ದುಕೊಂಡಿತ್ತು. ಚೀನಾದ ವಿರುದ್ದ ಮತ ಹಾಕದೇ ಉದಾರತೆ ತೋರಿಸಿತ್ತು. ಆದ್ರೆ ಚೀನಾ ಇದ್ಯಾವುದನ್ನ ತಲೆಯಲ್ಲಿ ಇಟ್ಟುಕೊಳ್ಳದೇ ತನ್ನ ನರಿ ಬುದ್ದಿಯನ್ನ ಮತ್ತೆ ತೋರಿಸಿದೆ. ಎಂದಿನಂತೆ ಈ ಬಾರಿಯೂ ವಿಶ್ವಸಂಸ್ಥೆಯಲ್ಲಿ ಚೀನಾ ಭಾರತ ಹಾಗೂ ಅಮೆರಿಕದ ವಿರುದ್ದ ಹೋಗಿದೆ. ಲಷ್ಕರ್‌ ಉಗ್ರ ಸಂಘಟನೆಯ ನಾಯಕ ಶಾಹೀದ್‌ ಮೊಹಮ್ಮದ್‌ನನ್ನ ಜಾಗತಿಕ ಭಯೋತ್ಪಾದಕರ ಲಿಸ್ಟ್‌ಗೆ ಸೇರಿಸಬೇಕು ಅಂತ ಭಾರತ ಹಾಗೂ ಅಮೆರಿಕ ಜಂಟಿಯಾಗಿ ಪ್ರಸ್ತಾವನೆ ಸಲ್ಲಿಸಿದ್ವು. ಈ ಪ್ರಸ್ತಾವನೆಯನ್ನ ಚೀನಾ ಹೋಲ್ಡ್‌ ಮಾಡಿದೆ. ಅಂದ್ಹಾಗೆ ಈತನನ್ನ ಅಮೆರಿಕದ ಟ್ರೆಶರಿ ಇಲಾಖೆ 2016ರಲ್ಲಿಯೇ ಗ್ಲೋಬಲ್‌ ಟೆರರಿಸ್ಟ್‌ ಅಂತ ಗುರುತಿಸಿದೆ. ಹೀಗಾಗಿ 1267 ಅಲ್‌ಖೈದಾ ಸ್ಯಾಂಕ್ಷನ್‌ ಕಮಿಟಿ ಅಡಿಯಲ್ಲಿ ಜಾಗತಿಕ ಉಗ್ರ ಅಂತ ಕಪ್ಪುಪಟ್ಟಿಗೆ ಸೇರಿಸಬೇಕು ಅಂತ ಉಭಯ ದೇಶಗಳು ಪ್ರೊಪೊಸಲ್‌ ಸಲ್ಲಿಸಿದ್ವು. ಆದ್ರೆ ಎಂದಿನಂತೆ ಪಾಕ್ ಬೆನ್ನಿಗೆ ನಿಂತು ಈ ಉಗ್ರನನ್ನ ಚೀನಾ ಬಚಾವ್‌ ಮಾಡಿದೆ. ಈ ಮೂಲಕ ಒಟ್ಟು 4 ಬಾರಿ ಪಾಕಿಸ್ತಾನ ಮೂಲದ ಉಗ್ರರನ್ನ ಜಾಗತಿಕ ಭಯೋತ್ಪಾದಕರ ಲಿಸ್ಟ್‌ಗೆ ಸೇರಿಸದಂತೆ ಚೀನಾ ತಡೆದಂತಾಗಿದೆ. ಕಳೆದ ತಿಂಗಳು ಕೂಡ ಲಷ್ಕರ್‌ ಉಗ್ರ ಸಂಘಟನೆಗೆ ಸೇರಿದ ಸಾಜಿದ್‌ ಮಿರ್‌ನನ್ನ ಜಾಗತಿಕ ಉಗ್ರ ಅಂತ ಘೋಷಿಸೋದಕ್ಕೆ ಅಮೆರಿಕ ಹಾಗೂ ಭಾರತ ನೀಡಿದ್ದ ಜಂಟಿ ಪ್ರಸ್ತಾವನೆಗೆ ಚೀನಾ ತಡೆ ನೀಡಿತ್ತು. ಈತ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದು 2008ರ ಮುಂಬೈ ಸರಣಿ ಸ್ಪೋಟದಲ್ಲಿ ಭಾಗಿಯಾಗಿದ್ದ. ಈತನಿಗೂ ಮೊದಲು ರೆಹಮಾನ್‌ ಮಕ್ಕಿ ಹಾಗೂ ರಾವುಫ್‌ ಅಜರ್‌ನನ್ನ ಉಗ್ರ ಅಂತ ಘೋಷಿಸೋದಕ್ಕೆ ಚೀನಾ ನಿರಾಕರಿಸಿತ್ತು.

-masthmagaa.com

Contact Us for Advertisement

Leave a Reply