masthmagaa.com:

ಕೊರೋನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಮಹಾಮಾರಿ ಮತ್ತೆ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ 47 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್​ ಕಮಿಷನ್ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. ಆಗಸ್ಟ್​ 9ರಂದು ಚೀನಾದಲ್ಲಿ 49 ಕೇಸ್ ವರದಿಯಾಗಿತ್ತು. ಅದಾದ ಬಳಿಕ ಇದೇ ಹೆಚ್ಚು. ಈ ಮೂಲಕ ಕೊರೋನಾವನ್ನು ಆರಂಭದಲ್ಲಿ ಕಂಟ್ರೋಲ್ ಮಾಡಿದ್ದ ಚೀನಾದಲ್ಲೂ ಯುರೋಪಿನ ದೇಶಗಳಂತೆ 2ನೇ ಅಲೆ ಏಳುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.

ಹೊಸದಾಗಿ ದೃಢಪಟ್ಟ 47 ಪ್ರಕರಣಗಳಲ್ಲಿ 23 ಲೋಕಲ್ ಕೇಸಸ್ ಆಗಿವೆ. ಈ 23 ಲೋಕಲ್ ಪ್ರಕರಣಗಳು ಕೂಡ ಇತ್ತೀಚೆಗೆ ಕೊರೋನಾ ಸ್ಫೋಟಗೊಂಡಿದ್ದ ಷಿನ್​ಜಿಯಾಂಗ್ ಪ್ರಾಂತ್ಯದಲ್ಲೇ ವರದಿಯಾಗಿದೆ. ಉಳಿದ ಪ್ರಕರಣಗಳು ವಿದೇಶದಿಂದ ಬಂದಂತಹ ಹಿನ್ನೆಲೆ ಹೊಂದಿದೆ ಅಂತ ಚೀನಾ ಹೇಳಿದೆ. ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಸ್ಥಳೀಯ ಪ್ರಕರಣಗಳೇ ಇಲ್ಲ, ಎಲ್ಲವೂ ವಿದೇಶದಿಂದ ಬಂದವು ಅಂತ ಹೇಳ್ತಿದ್ದ ಚೀನಾದಲ್ಲೀಗ ಸ್ಥಳೀಯ ಪ್ರಕರಣ ಕೂಡ ವರದಿಯಾಗ್ತಿರೋದು ಗಮನಾರ್ಹ.

ಚೀನಾ ಹೇಳುವ ಪ್ರಕಾರ ಅಲ್ಲಿ ಇದುವರೆಗೆ 85,915 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಇದರಲ್ಲಿ 80,943 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 4,634 ಜನ ಮೃತಪಟ್ಟಿದ್ದು 338 ಜನ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೀನಾ ಕೊಡುತ್ತಿರುವ ಈ ಲೆಕ್ಕದ ಬಗ್ಗೆಯೂ ಜತ್ತಿನ ಹಲವು ದೇಶಗಳಿಗೆ ಅನುಮಾನವಿದೆ.

-masthmagaa.com

Contact Us for Advertisement

Leave a Reply