ವಿಶ್ವಸಂಸ್ಥೆಯಲ್ಲಿ ಕಿಮ್ ಪರ ನಿಂತ ಚೀನಾ, ರಷ್ಯಾ!

masthmagaa.com:

ಪದೇ ಪದೇ ಹೈಪರ್​ಸಾನಿಕ್ ಸೇರಿದಂತೆ ವಿವಿಧ ಕ್ಷಿಪಣಿಗಳ ಪರೀಕ್ಷೆ ನಡೆಸಿ ಅಮೆರಿಕಗೆ ಸವಾಲೆಸೆಯುತ್ತಿರೋ ಉತ್ತರ ಕೊರಿಯಾಗೆ ಚೀನಾ ಮತ್ತು ರಷ್ಯಾ ಬೆಂಬಲ ಮುಂದುವರಿಸಿವೆ. ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆಗಾಗಿ ಉತ್ತರ ಕೊರಿಯಾದ ಮೇಲೆ ನಿರ್ಬಂಧಗಳನ್ನು ವಿಧಿಸೋ ವಿಶ್ವಸಂಸ್ಥೆ ಹೆಜ್ಜೆಗೆ ರಷ್ಯಾ, ಚೀನಾ ತಡೆಯೊಡ್ಡಿವೆ. ಕಿಮ್ ಕ್ಷಿಪಣಿ ಪರೀಕ್ಷೆ ಸಂಬಂಧ ಮುಚ್ಚಿದ ಕೋಣೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ನಡೀಬೇಕು ಅಂತ ಅಮೆರಿಕ ಬೇಡಿಕೆ ಇಟ್ಟಿತ್ತು. ಆದ್ರೆ ಅದಕ್ಕೂ ಚೀನಾ ಮತ್ತು ರಷ್ಯಾ ತಡೆಯೊಡ್ಡಿವೆ. ಈಗಾಗಲೇ ಉತ್ತರ ಕೊರಿಯಾದ ಮೇಲೆ ಒತ್ತಡ ಜಾಸ್ತಿಯಾಗಿದೆ ಅಂತ ಹೇಳಿರೋ ಈ ಎರಡು ದೇಶಗಳು, ಈಗಾಗಲೇ ಹೇರಿರೋ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಕೂಡ ತೆರವುಗೊಳಿಸಬೇಕು ಅಂತ ಆಗ್ರಹಿಸಿವೆ. ಕಳೆದ ವಾರವಷ್ಟೇ ಅಮೆರಿಕ ಉತ್ತರ ಕೊರಿಯಾದ ಮೇಲೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿತ್ತು. ಆದ್ರೆ ಇದಕ್ಕೆ ಕ್ಯಾರೇ ಎನ್ನದ ಕಿಮ್ ಜಾಂಗ್ ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸಿ, ಟಕ್ಕರ್ ಕೊಟ್ಟಿದ್ರು.

-masthmagaa.com

Contact Us for Advertisement

Leave a Reply