ಮುದಿಯಾಗುತ್ತಿದೆ ಚೀನಾ: ಯಾಕೆ ಗೊತ್ತಾ?

masthmagaa.com:

ಚೀನಾದಲ್ಲಿ ಕಳೆದ ವರ್ಷ ಕೂಡ ದಾಖಲೆ ಮಟ್ಟದಲ್ಲಿ ಜನನ ದರ ಕಡಿಮೆಯಾಗಿದೆ ಅಂತ ದಾಖಲೆಗಳಿಂದ ಗೊತ್ತಾಗಿದೆ. ಊಹೆ ಮಾಡ್ತಿರೋದಕ್ಕಿಂತಲೂ ಹೆಚ್ಚು ವೇಗದಲ್ಲಿ ವಯಸ್ಸಾದವರ ಪ್ರಮಾಣ ಜಾಸ್ತಿಯಾಗ್ತಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ. ಒಂದು ಕಾಲದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕಟ್ಟುನಿಟ್ಟಿನ ಕ್ರಮ ಈಗ ಚೀನಾಗೆ ಮುಳ್ಳಾಗಿ ಕಾಡ್ತಾ ಇದೆ. ದೇಶದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗ್ತಿದ್ದು, ವಯಸ್ಸಾದವರ ಸಂಖ್ಯೆ ಜಾಸ್ತಿಯಾಗ್ತಿದೆ. ಇದ್ರ ಮಕ್ಕಳ ಜನ ಸಂಖ್ಯೆ ವೃದ್ಧಿ ಕೂಡ ಕಡಿಮೆಯಾಗ್ತಿದ್ದು, ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರ್ತಿದೆ. 2020ರಲ್ಲಿ ಪ್ರತಿ ಸಾವಿರ ಮಂದಿಗೆ 8.52ನಷ್ಟಿದ್ದ ಜನನ ಪ್ರಮಾಣ ದರ 2021ರಲ್ಲಿ ಪ್ರತಿ ಸಾವಿರ ಮಂದಿಗೆ 8.52ಕ್ಕೆ ಇಳಿಕೆಯಾಗಿದೆ. ಇದು 1949ರಲ್ಲಿ ಚೀನಾ ಕಮ್ಯೂನಿಸ್ಟ್​ ಪಕ್ಷ ಸ್ಥಾಪಿಸಿದ ನಂತರದ ಅತೀ ಕಡಿಮೆಯ ಜನನ ಪ್ರಮಾಣವಾಗಿದೆ. ಚೀನಾದಲ್ಲಿ ಜನಸಂಖ್ಯೆ ಜಾಸ್ತಿಯಾಗಿದ್ದರಿಂದ 1980ರಲ್ಲಿ ಒನ್ ಚೈಲ್ಡ್ ಪಾಲಿಸಿ ಜಾರಿಗೆ ತರಲಾಯ್ತು. ಇದಾದ ಬಳಿಕ ಜನ ಒಂದೊಂದೇ ಮಕ್ಕಳನ್ನು ಹೊಂದಲು ಅವಕಾಶ ಇತ್ತು. ಇದ್ರಿಂದ ವಯಸ್ಸಾದವರ ಸಂಖ್ಯೆ ಜಾಸ್ತಿ ಆಯ್ತು. ಚೀನಾ 2016ರಲ್ಲಿ ಈ ಪಾಲಿಸಿಯನ್ನು ತೆಗೆದು ಹಾಕಿದ್ರೂ, ಜನನ ಪ್ರಮಾಣ ದರ ಇಳಿಯುತ್ತಲೇ ಇದೆ ಹೊರತು, ಜಾಸ್ತಿಯಾಗ್ತಿಲ್ಲ.

-masthmagaa.com

Contact Us for Advertisement

Leave a Reply