ಕೊರೋನಾ ಮುಂದೆ ನಡೀತಿಲ್ಲ ಚೀನಾ ಲಸಿಕೆಯ ಆಟ!

masthmagaa.com:

ಕೊರೋನಾ ವೈರಸ್​ ಮೊದಲು ಕಾಣಿಸಿಕೊಂಡ ಚೀನಾ ಈಗ ಜಗತ್ತಿನ ವಿವಿಧ ದೇಶಗಳಿಗೆ ಕೊರೋನಾ ಲಸಿಕೆಯನ್ನ ಮಾರ್ತಿದೆ. ಆದ್ರೆ ಚೀನಾ ಲಸಿಕೆಗಳನ್ನ ನಂಬಿದ ಹಲವು ದೇಶಗಳಲ್ಲೀಗ ಕೊರೋನಾ ಕೇಸಸ್​​ ಹೆಚ್ಚಾಗ್ತಿದೆ. ಅಂದ್ಹಾಗೆ ಕೊರೋನಾ ಲಸಿಕೆ ಹಾಕಿಯೂ ಕೊರೋನಾ ಕೇಸಸ್​ ಹೆಚ್ಚಾಗಿರೋ 6 ದೇಶಗಳನ್ನ ಸರ್ವೆ ಮಾಡಿದಾಗ ಅದ್ರಲ್ಲಿ ಐದು ದೇಶಗಳು ಚೀನಾ ಲಸಿಕೆಗಳನ್ನೇ ಹೆಚ್ಚಾಗಿ ಹಾಕ್ತಿವೆ ಅನ್ನೋ ವಿಚಾರ ಗೊತ್ತಾಗಿದೆ. ಯುಎಇ, ಸೆಷೆಲ್ಸ್​, ಮಂಗೋಲಿಯಾ, ಉರುಗ್ವೆ ಮತ್ತು ಚಿಲಿ ದೇಶಗಳು ಲಸಿಕೆ ಅಭಿಯಾನಕ್ಕೆ ಚೀನಾದ ಸಿನೋವ್ಯಾಕ್​ ಮತ್ತು ಸಿನೋಫಾರ್ಮ್ ಲಸಿಕೆಗಳನ್ನ ಪ್ರಮುಖವಾಗಿ ಬಳಸಿಕೊಂಡಿವೆ. ಇದೀಗ ಆ ದೇಶಗಳಲ್ಲೇ ಕೊರೋನಾ ಹೆಚ್ಚಾಗಿರೋದು ಚೀನಾ ಲಸಿಕೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಜೊತೆಗೆ ಡೆಲ್ಟಾ ರೂಪಾಂತರಿ ವಿರುದ್ಧ ಚೀನಾದ ಲಸಿಕೆಗಳು ಎಷ್ಟು ಪರಿಣಾಮಕಾರಿ ಅನ್ನೋದು ಕೂಡ ಗೊತ್ತಾಗಿಲ್ಲ. ಮತ್ತೊಂದುಕಡೆ ಥೈಲ್ಯಾಂಡ್​​ನಲ್ಲಿ ಚೀನಾದ ಸಿನೋವ್ಯಾಕ್​ ಲಸಿಕೆಯ ಎರಡೂ ಡೋಸ್​​ಗಳನ್ನ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ 618 ಜನರಿಗೆ ಕೊರೋನಾ ಸೋಂಕು ತಗುಲಿದೆ. ಒಬ್ರು ನರ್ಸ್​ ಮೃತಪಟ್ಟಿದ್ದಾರೆ, ಮತ್ತೊಬ್ರ ಸ್ಥಿತಿ ಗಂಭೀರವಾಗಿದೆ ಅಂತ ವರದಿಯಾಗಿದೆ. ಹೀಗಾಗಿ ಒಂದು ಡೋಸ್​ ಸಿನೋವ್ಯಾಕ್​ ಲಸಿಕೆ ಬಳಿಕ ಒಂದು ಡೋಸ್ ಆಸ್ಟ್ರಾಝೆನೆಕಾ ಲಸಿಕೆ ಕೊಡಲು ಥೈಲ್ಯಾಂಡ್​ ಸರ್ಕಾರ ಚಿಂತನೆ ನಡೆಸಿದೆ. ಹೀಗೇನಾದ್ರೂ ಆದ್ರೆ ಬೇರೆ ಬೇರೆ ಲಸಿಕೆಗಳನ್ನ ಮಿಕ್ಸಿಂಗ್ ಮಾಡಿದ ಮೊದಲ ದೇಶ ಎನಿಸಿಕೊಳ್ಳುತ್ತೆ ಥೈಲ್ಯಾಂಡ್. ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮೋದನೆ ಕೊಟ್ಟಿರೋ ಲಸಿಕೆಗಳಲ್ಲಿ ಚೀನಾದ ಸಿನೋಫಾರ್ಮ್ ಮತ್ತು ಸಿನೋವ್ಯಾಕ್​ ಲಸಿಕೆಗಳು ಕೂಡ ಬರ್ತವೆ. ಮತ್ತೊಂದುಕಡೆ ತೈವಾನ್​ ತನ್ನದು, ಅದು ತನಗೆ ಸೇರಬೇಕು ಅಂತ ಹೇಳೋ ಚೀನಾಗೆ ಲಸಿಕೆ ವಿಚಾರದಲ್ಲಿ ತೈವಾನ್​ ಚೆನ್ನಾಗಿ ಪೆಟ್ಟು ಕೊಟ್ಟಿದೆ. ಈ ವರ್ಷದ ಆರಂಭದಲ್ಲಿ ತೈವಾನ್​ ಸರ್ಕಾರ ಜರ್ಮನಿಯ ಬಿಯೋನ್​ಟೆಕ್ ಕಂಪನಿಯಿಂದ ನೇರವಾಗಿ ಫೈಝರ್ ಲಸಿಕೆ ಖರೀದಿಸಲು ಪ್ರಯತ್ನಪಟ್ಟಿತ್ತು. ಆದ್ರೆ ಆ ಡೀಲ್​ ಕುದುರದಂತೆ ನೋಡಿಕೊಂಡಿತ್ತು ಚೀನಾ. ಅಲ್ಲದೆ ತೈವಾನ್​ ತನ್ನ ಭಾಗ ಆಗಿರೋದ್ರಿಂದ ಚೀನಾ ಮೂಲದ Shanghai Fosun Pharmaceutical Group Co Ltd ಮೂಲಕವೇ ಲಸಿಕೆ ಖರೀದಿಸಬೇಕು ಅಂತ ತೈವಾನ್​ ಮೇಲೆ ಒತ್ತಡ ಹೇರ್ತಾ ಬರ್ತಿತ್ತು. ಆದ್ರೀಗ ತೈವಾನ್​​ನ​ Foxconn ಮತ್ತು TSMC ಅನ್ನೋ​​ ಎರಡು​ ಕಂಪನಿಗಳು ಬಿಯೋನ್​ಟೆಕ್​ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿವೆ. 1 ಕೋಟಿ ಡೋಸ್​ಗಳನ್ನ 350 ಮಿಲಿಯನ್​ ಡಾಲರ್​ಗೆ ಖರೀದಿಸೋ ಒಪ್ಪಂದ ಇದಾಗಿದೆ. ಅತ್ತ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಕೊರೋನಾ ಹಾವಳಿ ನಿಲ್ತಿಲ್ಲ. ಹೊಸದಾಗಿ 112 ಜನರಿಗೆ ಸೋಂಕು ದೃಢಪಟ್ಟಿದೆ. ಬಹುತೇಕ ಕೇಸ್​ಲಾಕ್​ಡೌನ್​ನಲ್ಲಿರೋ​​ ಸಿಡ್ನಿ ನಗರದಲ್ಲಿ ವರದಿಯಾಗಿದೆ. ಇನ್ನು ಕೊರೋನಾದ ಮೂರನೇ ಅಲೆ ಎದುರಿಸುತ್ತಿರೋ ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 25 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್​ ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply