ಶ್ರೀಲಂಕಾಗೆ ಬಂದ ಚೀನಾದ ಸ್ಪೈ ಹಡಗು! ಭಾರತದ ಪ್ರತಿಕ್ರಿಯೆ ಏನು?

masthmagaa.com:

ಭಾರತದ ವ್ಯಾಪಕ ವಿರೋಧದ ನಡುವೆಯೂ ಚೀನಾದ ಪತ್ತೆದಾರಿ ಹಡಗು `ಯುವಾನ್‌ ಯಾಂಗ್‌ 5′ ಶ್ರೀಲಂಕಾದ ಹಂಬಂತೋಟ ಬಂದಿರಗೆ ಬಂದು ನಿಂತಿದೆ. ಭಾರತದ ಸೂಕ್ಷ್ಮ ಸ್ಥಳಗಳ ಹಾಗೂ ರಕ್ಷಣೆಗೆ ಸಂಬಂಧಪಟ್ಟಂತ ಪ್ರಮುಖ ಜಾಗಗಳ ಮೇಲೆ ಕಣ್ಣಿಡೋಕೆ ಚೀನಾದ ಈ ಹಡಗು ದುರುಪಯೋಗ ಆಗ್ಬೋದು ಅಂತ ಭಾರತ ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಇದಕ್ಕೆ ಆರಂಭದಲ್ಲಿ ಸ್ಪಂದಿಸಿದ್ದ ಶ್ರೀಲಂಕಾ ಸರ್ಕಾರ ಚೀನಾದ ಹಡಗಿಗೆ ತಾತ್ಕಲಿಕ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಚೀನಾದ ಅಧಿಕಾರಿಗಳು ಲಂಕಾದ ಜೊತೆಗೆ ಮಾತುಕತೆ ನಡೆಸಿದ್ರು. ತದನಂತರ ಚೈನಾ ಹಡಗಿನ ಪ್ರವೇಶಕ್ಕೆ ಲಂಕಾ ಸರ್ಕಾರ ಯೆಸ್‌ ಅಂದಿತ್ತು. ಈಗ ಕಡೆಗೂ ಚೀನಿಯರ ಈ ಬಾಹ್ಯಾಕಾಶ ಪತ್ತೆದಾರಿ ಹಡಗು ಭಾರತದ ಹತ್ತಿರಕ್ಕೆ ಬಂದಿದೆ. ಇನ್ನು ಭಾರತದಿಂದ ಇದಕ್ಕೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೋ ಶ್ರೀಲಂಕಾದ ವಿದೇಶಾಂಗ ಇಲಾಖೆ ʻಚೀನಾದ ಹಡಗಿನ ವಿಚಾರಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲಿ ನೆರೆಯ ದೇಶದ ಭದ್ರತೆ ಹಾಗೂ ಸಹಕಾರದ ನಿರ್ವಹಣೆಗೆ ಹೆಚ್ಚಿನ ಪ್ರಾಶಸ್ಯ್ತ ನೀಡ್ತೀವಿ ಅಂತ ಹೇಳಿದೆ. ಜೊತೆಗೆ ಶ್ರೀಲಂಕಾ ಸರ್ಕಾರ ಎಲ್ಲ ಪಕ್ಷಗಳ ಜೊತೆಗಿನ ಸಂಬಂಧದ ಮೇಲೂ ಕಾಳಜಿ ಹೊಂದಿದೆ..ಅಂದ್ರೆ ನಮಗೆ ಎಲ್ರೂ ಬೇಕು ಅನ್ನೋ ರೀತಿ ಹೇಳಿದೆ.)ಇನ್ನು ಇದಕ್ಕೂ ಮುಂಚೆ ಅಂದ್ರೆ ನಿನ್ನೆ ಶ್ರೀಲಂಕಾಗೆ ಭಾರತದಿಂದ ವಿಮಾನ ಒಂದು ಉಡುಗೊರೆ ರೂಪದಲ್ಲಿ ಹೋಗಿದೆ. ಆಗಸದಿಂದಲೇ ನೆಲದ ಮೇಲೆ ತೀಕ್ಷ್ಣ ನಿಗಾ ಇರಿಸಬಲ್ಲ ಭಾರತದ ಸೇನೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರೋ ‘ಡಾರ್ನಿಯರ್’ ವಿಮಾನವನ್ನ ಭಾರತ ಸರ್ಕಾರ ಶ್ರೀಲಂಕಾಗೆ ಗಿಫ್ಟ್‌ ಮಾಡಿದೆ. ಚೀನಾದ ಬೇಹುಗಾರಿಕೆ ಹಡಗು ಲಂಗರು ಹಾಕುವುದಕ್ಕೆ ಕೇವಲ ಒಂದು ದಿನ ಮುಂಚೆ ಈ ವಿಮಾನ ಉಡುಗೊರೆಯ ಬೆಳವಣಿಗೆ ನಡೆದಿರೋದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಭಾರತ ಸರ್ಕಾರ ʻಇದನ್ನು ಶ್ರೀಲಂಕಾ, ಮಾದಕವಸ್ತುಗಳ ಕಳ್ಳಸಾಗಣೆ ತಡೆಯೋಕೆ. ಸಾಗರ ಸುರಕ್ಷೆ ಹೆಚ್ಚಿಸೋಕೆ ಬಳಸಿಕೊಳ್ಳಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply