ಡೆಲಿವರಿ ಬಾಯ್‌ ಆದ ಕಾಮಿಡಿ ಕಿಲಾಡಿ ಗೋವಿಂದೇಗೌಡ!

masthmagaa.com:

ಸ್ಯಾಂಡಲ್‌ವುಡ್‌ನಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೆ ಇರುತ್ತವೆ. ಇದರಿಂದ ಡಿಫರೆಂಟ್‌ ಆ್ಯಂಗಲ್‌ ಇರೋ ಸಿನಿಮಾ ನೋಡುವ ಅವಕಾಶ ಸಿಗ್ತಾ ಇದೆ. ಈಗ ಇಂತಹದೇ ಅವಕಾಶ ಕಲ್ಪಿಸಲು ಸಜ್ಜಾಗುತ್ತಿದೆ ‘ಕ್ಯಾಶ್ ಆನ್ ಡೆಲಿವರಿ’ ಚಿತ್ರತಂಡ. ಕನ್ನಡ ಸಿನಿಮಾರಂಗದಲ್ಲಿ ಹೊಸ ಪ್ರಯೋಗ ಮಾಡಲು ಚಿತ್ರತಂಡ ಮುಂದಾಗಿದೆ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಮೊದಲಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಪತ್ನಿ ದಿವ್ಯಶ್ರೀ ಮೋಹನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಡೆಲಿವರಿ ಬಾಯ್​ ಆಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ವಸ್ತುವನ್ನು, ಆಹಾರವನ್ನು ಮನೆ ಬಾಗಿಲಿಗೆ ಹೋಗಿ ತಲುಪಿಸಬೇಕು. ಮಳೆ, ಚಳಿಗಾಳಿ ಮಧ್ಯೆಯೇ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಸ್ತುವನ್ನು ತಲುಪಿಸಬೇಕು ಆದರೆ, ಇತ್ತೀಚೆಗೆ ಡೆಲಿವರಿ ಬಾಯ್​ಗಳ ಮೇಲೆ ಹಲ್ಲೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಇವರ ಕೊಲೆ ಕೂಡ ಆಗಿದೆ. ಈ ರೀತಿಯ ವಿಚಾರಗಳನ್ನೇ ಇಟ್ಟುಕೊಂಡು ದಿವ್ಯಶ್ರೀ ಅವರು ಕಥೆ ಬರೆದಿದ್ದಾರೆ.

ಕಡ್ಡಿಪುಡಿ ಚಂದ್ರು, ಸುಂದರ್, ಮಿಮಿಕ್ರಿ ಗೋಪಿ, ಉಷಾ ಕೋಕಿಲ, ಪ್ರಕಾಶ್ ತುಂಬಿನಾಡು, ಅನುಷಾ, ರಘುರಾಮನ್ ಕೊಪ್ಪ ಮೊದಲದಾವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರು ಹಾಡುಗಳನ್ನು ಬರೆಯುತ್ತಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೊದಲಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ದಕ್ಷಿತ್ ಅವರು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ‘ಅಂಬುಜ’ ಸಿನಿಮಾ ನಿರ್ಮಾಪಕ ಕಾಶಿನಾಥ್ ಮಡಿವಾಳರ್ ಈ ಹೊಸ ಪ್ರಯತ್ನಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Contact Us for Advertisement

Leave a Reply