ಪಂಜ್​ಶಿರ್​ನಲ್ಲಿ ತಾಲಿಬಾನಿಗಳ ವರ್ತನೆಗೆ ಇರಾನ್ ಆಕ್ರೋಶ

masthmagaa.com:

ಪಂಜ್​ಶಿರ್​​ನಲ್ಲಿ ತಾಲಿಬಾನಿಗಳ ಅಟ್ಟಹಾಸವನ್ನು ಇರಾನ್ ಖಂಡಿಸಿದೆ. ಪಂಜ್​ಶಿರ್​ನ್ನೂ ನಾವು ಕಂಟ್ರೋಲ್​​​​ ತೆಗೆದುಕೊಂಡಿದ್ದೇವೆ ಎಂಬ ತಾಲಿಬಾನ್​ ಹೇಳಿಕೆಗೆ ಪ್ರತಿಕ್ರಿಯಿಸಿರೋ ಇರಾನ್​ ವಿದೇಶಾಂಗ ಇಲಾಖೆ ವಕ್ತಾರ ಖಾತಿಬ್​​ಝೆಡಾಹ್​​, ಇದು ತುಂಬಾ ಆತಂಕಕಾರಿ ವಿಚಾರ ಅಂತ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಎಲ್ಲವೂ ಅಂತ್ಯವಾಗಿ ಜನಪರ ಸರ್ಕಾರ ರಚನೆಯಾಗಬೇಕು. ಅಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಕೂಡ ನಿಲ್ಲಬೇಕು ಅಂತ ಪಾಕಿಸ್ತಾನಕ್ಕೂ ಮಾತಿನೇಟು ಕೊಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ವಿವಿಧ ಉದ್ದೇಶಗಳಿಂದ ಎಂಟ್ರಿ ಕೊಡ್ತಿರೋ ನಮ್ಮ ಮಿತ್ರದೇಶಗಳು ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಫ್ಘಾನಿಸ್ತಾನ ತನ್ನ ಶತ್ರುಗಳನ್ನಾಗಲೀ, ಆಕ್ರಮಣಕಾರಿಗಳನ್ನಾಗಲೀ ಒಪ್ಪಿಕೊಳ್ಳಲ್ಲ ಅಂತ ಹೇಳಿದ್ದಾರೆ. ಇರಾನ್ ಅಫ್ಘಾನಿಸ್ತಾನದ ಪಕ್ಕದ ದೇಶವಾಗಿದ್ದು, 900 ಕಿಲೋಮೀಟರ್ ಉದ್ದದ ಗಡಿ ಹಂಚಿಕೊಂಡಿದೆ. ಅಂದಹಾಗೆ ಇರಾನ್ ಈ ಹಿಂದೆ 1996ರಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಲೂ ಮಾನ್ಯತೆ ನೀಡಿರಲಿಲ್ಲ.

-masthmagaa.com

Contact Us for Advertisement

Leave a Reply