ಕಾಂಗ್ರೆಸ್‌ಗೆ IT ಶಾಕ್:‌ ₹523.87 ಕೋಟಿ ಲೆಕ್ಕವಿಲ್ಲದ ವಹಿವಾಟು!

masthmagaa.com:

ಕಾಂಗ್ರೆಸ್‌ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಮತ್ತೊಂದು ಭರ್ಜರಿ ಶಾಕ್‌ ನೀಡಿದೆ. ಇತ್ತೀಚೆಗಷ್ಟೇ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ನ್ನ ಸಮಯಕ್ಕೆ ಸರಿಯಾಗಿ ಫೈಲ್ ಮಾಡದ ಕಾರಣಕ್ಕೆ ಕಾಂಗ್ರೆಸ್‌ ಅಕೌಂಟ್‌ಗಳಿಂದ IT ಡಿಪಾರ್ಟ್‌ಮೆಂಟ್‌ 135 ಕೋಟಿ ವಿಥ್‌ಡ್ರಾ ಮಾಡಿತ್ತು. ಇದೀಗ 2014ರಿಂದ 2021ರವರೆಗಿನ ಲೆಕ್ಕಕ್ಕೆ ಸಿಗದ ₹523.87 ಕೋಟಿ ಮೌಲ್ಯದ ವಹಿವಾಟುಗಳ ವಿಚಾರವಾಗಿ ಕಷ್ಟಕ್ಕೆ ಸಿಲುಕಿದೆ. 2019ರ ಟೈಮಲ್ಲಿ ನಡೆಸಲಾಗಿದ್ದ IT ರೇಡ್‌ಗಳಲ್ಲೇ ಈ ವಹಿವಾಟುಗಳು ಟ್ರೇಸ್‌ ಆಗಿದ್ವು ಎನ್ನಲಾಗ್ತಿದೆ. ಈಗ ಈ ಹಣಕ್ಕೂ ಸೇರಿ ಬಡ್ಡಿ ಹಾಗೂ ಭರ್ಜರಿ ಪೆನಾಲ್ಟಿ ಬೀಳುವ ನಿರೀಕ್ಷೆ ಇದೆ ಅಂತ ಕಾಂಗ್ರೆಸ್‌ ಸಂಸದ ವಿಕೆ ಟಂಖ ಹೇಳಿದ್ದಾರೆ. ಅಲ್ಲದೆ ಬಿಜೆಪಿ ಸರ್ಕಾರಕ್ಕೆ ನಮ್ಮ 135‌ ಕೋಟಿ ರೂಪಾಯಿ ಹಣ ಕಿತ್ಕೊಂಡು ಪಕ್ಷವನ್ನ ತುಳಿದದ್ದು ಸಾಲಲಿಲ್ಲ ಅನ್ಸುತ್ತೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply