ಕಾಂಗ್ರೆಸ್‌ಗೆ ಮತ್ತೆ ನೋಟಿಸ್‌ ನೀಡಿದ IT: 1,800 ಕೋಟಿ ಭರಿಸಲು ಸೂಚನೆ!

masthmagaa.com:

ಆದಾಯ ತೆರಿಗೆ ಇಲಾಕೆ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ಮೇಲೆ ಶಾಕ್‌ ಕೊಡ್ತಾನೆ ಇದೆ. ಈ ಫ್ರೆಶ್‌ ಆಗಿ ಬರೋಬ್ಬರಿ 1,800 ಕೋಟಿ ರೂಪಾಯಿ ಟ್ಯಾಕ್ಸ್‌ ವಿಚಾರವಾಗಿ IT ಕಾಂಗ್ರೆಸ್‌ಗೆ ನೋಟಿಸ್‌ ನೀಡಿದೆ. ಈ ಹಿಂದಿನ ಹಳೆಯ IT ನೋಟಿಸ್‌ಗಳನ್ನ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನ ದಿಲ್ಲಿ ಹೈಕೋರ್ಟ್‌ ರಿಜೆಕ್ಟ್‌ ಮಾಡಿದೆ. ಇದ್ರ ಬೆನ್ನಲ್ಲೇ ಇಲಾಖೆ ಈಗ ಕಾಂಗ್ರೆಸ್‌ಗೆ ಈ ಹೊಸ ನೋಟಿಸ್‌ ನೀಡಿದೆ. ಇದ್ರಲ್ಲಿ 2017-18ರಿಂದ 2020-21ರ ವರ್ಷಕ್ಕೆ ಬಾಕಿ ಉಳಿದಿರೋ ಆದಾಯ ತೆರಿಗೆ ಹಣ, ಅದಕ್ಕೆ ಬಡ್ಡಿ ಮತ್ತು ದಂಡ ಸೇರಿ ಒಟ್ಟು 1,823.08 ಕೋಟಿ ರೂಪಾಯಿ ಪಾವತಿಸಬೇಕು ಅಂತ ಉಲ್ಲೇಖಿಸಿದೆ. ಈ ವಿಚಾರವಾಗಿ ಕಾಂಗ್ರೆಸ್‌ ಮೇಲೆ ಕೇಂದ್ರ ಸರ್ಕಾರ ತೆರಿಗೆ ಬಯೋತ್ಪಾದನೆ ಮಾಡ್ತಿದೆ ಅಂತ ಆರೋಪಿಸಿದೆ. ಅಲ್ಲದೆ IT ಇಲಾಖೆ ಕೇಸರಿ ಪಾರ್ಟಿಗೆ 4,600 ಕೋಟಿ ರೂಪಾಯಿ ದಂಡ ವಿಧಿಸ್ಬೇಕು ಅಂತ ಆರೋಪಿಸಿದೆ.

-masthmagaa.com

Contact Us for Advertisement

Leave a Reply