ಕೊರೋನ 2ನೇ ಅಲೆ ಮುಗೀತಾ? ಇಲ್ಲವಾ?

masthmagaa.com:

ಕೊರೋನ ಎರಡನೇ ಅಲೆ ಮೇ ಮಧ್ಯಭಾಗದಲ್ಲಿ ಗರಿಷ್ಠಮಟ್ಟ ತಲುಪುತ್ತೆ.., ಅಂದ್ರೆ ಪೀಕ್ ತಲುಪುತ್ತೆ ಅಂತ ತಜ್ಞರು ಹೇಳಿದ್ರು. ಈಗ ನಾವು ಸರಿಯಾಗಿ ಮೇ ಮಧ್ಯಭಾಗದಲ್ಲಿ ಇದ್ದೀವಿ. ಹಾಗಾದ್ರೆ ಗರಿಷ್ಠ ಮಟ್ಟ ತಲುಪಿದ್ದೀವಾ? ಇನ್ಮುಂದೆ ಹಾಗಾದ್ರೆ ಇಳೀತಾ ಹೋಗುತ್ತಾ? ಅನ್ನೋದು ಗೊತ್ತಾಗ್ಬೇಕು ಅಂದ್ರೆ ಕಳೆದ ಒಂದು ವಾರದ ಟ್ರೆಂಟ್ ತೊರಿಸೋ ಗ್ರಾಫ್ ನೋಡ್ಕೊಂಡು ಬರಬೇಕು. ಬನ್ನಿ ಹಾಗಾದ್ರೆ ಕರ್ನಾಟಕ ಹಾಗೂ ದೇಶದ ಕಳೆದ ಒಂದು ವಾರದ ಕೊರೋನ ಗ್ರಾಫ್ ನೋಡ್ಕೊಂಡು ಬರೋಣ. ಮೊದಲಿಗೆ ರಾಜ್ಯದ ಸರದಿ.

STATE CENTRAL
ಸೋಮವಾರ 39,305 3,66,161
ಮಂಗಳವಾರ 39,510 3,29,942
ಬುಧವಾರ 39,998 3,48,421
ಗುರುವಾರ 35,297 3,62,727
ಶುಕ್ರವಾರ 41,779 3,43,144
ಶನಿವಾರ 41,779 3,26,098
ಭಾನುವಾರ 31,531 3,11,170

ಇದನ್ನ ನೋಡಿದಾಗ ಕರ್ನಾಟಕದಲ್ಲಿ ಇನ್ನು ಪೀಕ್ ತಲುಪಿದೆಯಾ ಇಲ್ವಾ ಅನ್ನೋದು ಸ್ಪಷ್ಟ ಆಗೋಕೆ ಇನ್ನೊಂದು ವಾರ ನೋಡಬೇಕು ಅನಿಸ್ತಿದೆ. ಆದ್ರೆ ಓವರಾಲ್ ಇಡೀ ದೇಶದ ವಿಚಾರ ಬಂದಾಗ ಪೀಕ್ ತಲುಪಿ ಈಗ ಎರಡನೇ ಅಲೆ ಕೆಳಗೆ ಮುಖ ಮಾಡಿರೋ ಸ್ಪಷ್ಟ ಸಂಕೇತಗಳು ಕಾಣ್ತಿವೆ. ನೋಡ್ಬೇಕು ಈಗ ಬರೋ ವಾರ ಗ್ರಾಫ್ ಯಾವ ಥರ ಹೋಗುತ್ತೆ ಅಂತ.

-masthmagaa.com

Contact Us for Advertisement

Leave a Reply