ಚೀನಾ ಬಳಿಕ ಇಟಲಿಯಲ್ಲಿ ಕೊರೋನಾ ಕಾಟ! 24 ಗಂಟೆ.. 189 ಸಾವು

masthmagaa.com:

ಚೀನಾದ ವುಹಾನ್​ನಲ್ಲಿ ಶುರುವಾದ ಕೊರೋನಾ ವೈರಸ್ ಈಗ ವಿಶ್ವದ 127 ದೇಶಗಳಿಗೆ ವ್ಯಾಪಿಸಿದೆ. ಆದ್ರೆ ಈಗ ಕೊರೋನಾ ವೈರಸ್ ಹಾವಳಿ ಚೀನಾದಲ್ಲಿ ಕಡಿಮೆಯಾಗುತ್ತಿದೆ. ಆದ್ರೆ ಇಟಲಿಯಲ್ಲಿ ಕೊರೋನಾ ಹಾವಳಿ ಮಿತಿ ಮೀರುತ್ತಿದೆ. ಕಳೆದ 24 ಗಂಟೆಯಲ್ಲಿ ಚೀನಾದಲ್ಲಿ 8 ಮಂದಿ ಸಾವನ್ನಪ್ಪಿದ್ರೆ, ಇಟಲಿಯಲ್ಲಿ 189 ಮಂದಿ ಜೀವ ಬಿಟ್ಟಿದ್ದಾರೆ.

ಇನ್ನು ಜಗತ್ತಿನಾದ್ಯಂತ 24 ಗಂಟೆಗಳಲ್ಲಿ 321 ಮಂದಿ ಸಾವನ್ನಪ್ಪಿದ್ದಾರೆ. ಇಡೀ ಜಗತ್ತಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 4973ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಒಟ್ಟು 1,34,679 ಕೊರೋನಾ ಸೋಂಕು ತಗುಲಿದ್ದು, 69,142 ಮಂದಿ ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply