masthmagaa.com:

ದೆಹಲಿ: ಕೊರೋನಾ ಲಸಿಕೆ ವಿತರಣೆ ವಿಚಾರವಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದ್ರಲ್ಲಿ ಪ್ರತಿ ಕೊರೋನಾ ಕೇಂದ್ರದಲ್ಲಿ ದಿನಕ್ಕೆ ನೂರು ಮಂದಿ ಫಲಾನುಭವಿಗಳಿಗೆ ಕೊರೋನಾ ಲಸಿಕೆ ವಿತರಿಸಬಹುದು. ವ್ಯವಸ್ಥೆ ಸುಸಜ್ಜಿತವಾಗಿದ್ದರೆ, ವೇಯ್ಟಿಂಗ್ ರೂಮ್ ಮತ್ತು ಜನರನ್ನು ನಿಯಂತ್ರಿಸಲು ವ್ಯವಸ್ಥೆ ಇದ್ರೆ ಹೆಚ್ಚೆಂದರೆ 200 ಮಂದಿಗೆ ಲಸಿಕೆ ಹಾಕಬಹುದು ಅಂತ ಹೇಳಿದೆ. 200ಕ್ಕೂ ಹೆಚ್ಚು ಜನರಿಗೆ ಒಂದೇ ದಿನ ಲಸಿಕೆ ಹಾಕಲು ನಿರ್ಧರಿಸಿದ್ರೆ, 5 ಜನರ ಪ್ರತ್ಯೇಕ ತಂಡವನ್ನು ನಿರ್ಮಿಸಬೇಕು. ಅದ್ರಲ್ಲಿ ಓರ್ವ ವ್ಯಾಕ್ಸಿನೇಟರ್ ಆಫೀಸರ್ ಮತ್ತು 4 ಮಂದಿ ವ್ಯಾಕ್ಸಿನೇಷನ್ ಅಧಿಕಾರಿಗಳು ಇರಬೇಕೆಂದು ಸೂಚಿಸಿದೆ. ರಾಜ್ಯಗಳು ಮತ್ತು ಕೇಂದ್ರಗಳು ಲಸಿಕೆ ವಿತರಣೆ ದಿನವನ್ನು ನಿಗದಿಪಡಿಸಬಹುದು. ಲಸಿಕೆ ವಿತರಣೆ ಪ್ರಕ್ರಿಯೆ ಚುನಾವಣೆ ಪ್ರಕ್ರಿಯೆಯಂತೆಯೇ ನಡೆಸಬೇಕು ಅಂತ ಹೇಳಿದೆ.

ಮೊದಲ ಹಂತ

ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಫ್ರಂಟ್​ ಲೈನ್ ವರ್ಕರ್​, 26 ಕೋಟಿ ಹಿರಿಯ ನಾಗರಿಕರಿಗೆ ಮತ್ತು ಈಗಾಗಲೇ ಬೇರೆ ಕಾಯಿಲೆಯಿಂದ ಬಳಲುತ್ತಿರುವ 1 ಕೋಟಿ ಮಂದಿಗೆ ಲಸಿಕೆ ಹಾಕಲಾಗುತ್ತೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ವೋಟರ್​​ ಲಿಸ್ಟ್​​ನಿಂದಲೇ 50 ವರ್ಷ ಮೇಲ್ಪಟ್ಟ ಹಿರಿಯ ನಾಯಕರನ್ನು ಪಟ್ಟಿ ಮಾಡುವಂತೆಯೂ ಸೂಚಿಸಿದೆ.

ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಟ್ರ್ಯಾಕ್​

ಕೋವಿನ್ ಆ್ಯಪ್ ಮೂಲಕ ಲಸಿಕೆಯ ಫಲಾನುಭವಿಗಳನ್ನು ಟ್ರ್ಯಾಕ್ ಮಾಡಲಾಗುತ್ತೆ. ಈ ಪ್ಲಾಟ್​​ಫಾರ್ಮ್​​ನಲ್ಲಿ ಎಲ್ಲಾ ಮಾಹಿತಿಗಳನ್ನು ರಿಯಲ್​ ಟೈಂನಲ್ಲಿ ಅಪ್​ಡೇಟ್ ಮಾಡಲಾಗುತ್ತೆ. ಲಸಿಕೆ ವಿತರಣಾ ಕೇಂದ್ರದಲ್ಲಿ ಆದ್ಯತೆ ಆಧಾರದಲ್ಲಿ ರಿಜಿಸ್ಟರ್​​ ಆಗಿರುವವರಿಗೆ ಮಾತ್ರವೇ ಲಸಿಕೆ ಹಾಕಬೇಕು ಅಂತ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಅಂದ್ರೆ ವ್ಯಕ್ತಿಯೊಬ್ಬ ನೇರವಾಗಿ ಲಸಿಕೆ ಕೇಂದ್ರಕ್ಕೆ ಹೋಗಿ ರಿಜಿಸ್ಟರ್ ಮಾಡಿಸಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಿಲ್ಲ.

ವ್ಯಾಕ್ಸಿನೇಷನ್ ತಂಡದಲ್ಲಿ 5 ಮಂದಿ ಇರಬೇಕು

ಒಂದು ವ್ಯಾಕ್ಸಿನೇಷನ್ ತಂಡದಲ್ಲಿ 5 ಮಂದಿ ಇರಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ.

-ವ್ಯಾಕ್ಸಿನೇಟರ್ ಆಫೀಸರ್​- ಡಾಕ್ಟರ್ ಅಥವಾ ನರ್ಸ್​​

-ವ್ಯಾಕ್ಸಿನೇಷನ್ ಆಫೀಸರ್ 1- (ಪೊಲೀಸ್ ಗಾರ್ಡ್​ ಅಥವಾ ಇತರೆ ಭದ್ರತಾ ಸಿಬ್ಬಂದಿ) ಇವರು ಫಲಾನುಭವಿಗಳ ರಿಜಿಸ್ಟ್ರೇಷನ್ ನೋಡಿಕೊಳ್ಳಬೇಕು

-ವ್ಯಾಕ್ಸಿನೇಷನ್ ಆಫೀಸರ್ 2- ದಾಖಲೆಗಳನ್ನು ಪ್ರಮಾಣೀಕರಿಸುತ್ತಾರೆ

-ವ್ಯಾಕ್ಸಿನೇಷನ್ ಆಫೀಸರ್ 3, 4- ಜನಸಂದಣಿಯನ್ನು ನಿಯಂತ್ರಿಸೋದು, ಶಿಸ್ತನ್ನು ಕಾಯ್ದುಕೊಳ್ಳುತ್ತಾರೆ.

ಕೊರೋನಾ ಲಸಿಕೆ ಹಾಕಿದ ಬಳಿಕ ಉಂಟಾಗೋ ಪರಿಣಾಮಗಳನ್ನು ಪತ್ತೆಹಚ್ಚಲು ಮತ್ತು ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು. ಈ ಮೂಲಕ ಜನರಲ್ಲಿ ಲಸಿಕೆಯ ಕುರಿತು ಭರವಸೆ ಮೂಡಿಸಬೇಕು.

ಮೂರು ಕೋಣೆಗಳು ಇರಬೇಕು

-ವೇಯ್ಟಿಂಗ್ ರೂಂ: ಲಸಿಕೆ ಹಾಕಿಸಿಕೊಳ್ಳಲು ಕಾಯೋ ಕೊಠಡಿ

-ವ್ಯಾಕ್ಸಿನೇಷನ್ ರೂಂ:  ಲಸಿಕೆ ಹಾಕಿಸಿಕೊಳ್ಳುವ ಕೊಠಡಿ

-ಅಬ್ಸರ್ವೇಷನ್ ರೂಂ: ಲಸಿಕೆ ಹಾಕಿಸಿಕೊಂಡ ಬಳಿಕ ಈ ಕೊಠಡಿಯಲ್ಲಿ 30 ನಿಮಿಷ ಇರಬೇಕು. ಈ ಕೊಠಡಿಯಲ್ಲಿ ಕುಡಿಯಲು ನೀರು, ಶೌಚಾಲಯದ ವ್ಯವಸ್ಥೆ ಇರಬೇಕು ಅಂತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದ್ಯಾಕೆ ಅಂದ್ರೆ ಲಸಿಕೆ ಹಾಕಿದ ಬಳಿಕ ಏನಾದ್ರೂ ಅಡ್ಡಪರಿಣಾಮ ಆಗುತ್ತಾ ಅಂತ ನೋಡೋಕೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಬೇಕು.

ಹೀಗೆ ವಿವಿಧ ಹಂತಗಳಲ್ಲಿ ವಿವಿಧ ಅಂಶಗಳನ್ನು ಕೇಂದ್ರ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

-masthmagaa.com

 

 

 

Contact Us for Advertisement

Leave a Reply