ತಬ್ಲಿಘಿ ಜಮಾತ್​ನಲ್ಲಿ ಭಾಗಿಯಾದ ರೋಹಿಂಗ್ಯಗಳು ನಾಪತ್ತೆ..? ಹುಡುಕಾಟ ಶುರು

masthmagaa.com:

ದೆಹಲಿ: ರೋಹಿಂಗ್ಯ ಮುಸ್ಲಿಂ  ನಿರಾಶ್ರಿತರನ್ನು ಗುರುತಿಸಿ, ಸ್ಕ್ರೀನಿಂಗ್ ನಡೆಸುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ರೋಹಿಂಗ್ಯಾ ನಿರಾಶ್ರಿತರು ತಬ್ಲಿಘಿ ಜಮಾತ್​​ನ ಸದಸ್ಯರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇರೋದ್ರಿಂದ ಈ ಹೆಜ್ಜೆ ಇಟ್ಟಿದೆ. ಅಲ್ಲದೆ ನಿರಾಶ್ರಿತ ಕ್ಯಾಂಪ್​​ನಿಂದ ನಾಪತ್ತೆಯಾಗಿರುವವರನ್ನು ಕೂಡ ಪತ್ತೆಹಚ್ಚುವಂತೆ ಎಲ್ಲಾ ರಾಜ್ಯಗಳ ಡಿಜಿಪಿಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ.

ರೋಹಿಂಗ್ಯ ಮುಸ್ಲಿಮರು ತಬ್ಲಿಘಿ ಜಮಾತ್​​ನ ಇಜ್ತೆಮಾ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಗೂ ಕೂಡ ಕೊರೋನಾ ತಗುಲಿರುವ ಸಾಧ್ಯತೆ ಇದೆ. ಅದರಲ್ಲೂ ಹೈದ್ರಾಬಾದ್​​, ತೆಲಂಗಾಣದ ರೋಹಿಂಗ್ಯ ಮುಸ್ಲಿಮರು ಹರಿಯಾಣದ ಮೇವತ್​​ನಲ್ಲಿ ನಡೆದ ಇಜ್ತೆಮಾ ಸೇರಿದಂತೆ ತಬ್ಲಿಘಿ ಜಮಾತ್​ನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು. ಅದೇ ರೀತಿ ದೆಹಲಿಯ ಶ್ರಮ್​ ವಿಹಾರ್ ಮತ್ತು ಶಹೀನ್​ಭಾಗ್​​ನಿಂದಲೂ ಈ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಿದ್ರು. ಆದ್ರೆ ಅವರ್ಯಾರು ತಮ್ಮ ಕ್ಯಾಂಪ್​​ಗಳಿಗೆ ವಾಪಸ್ಸಾಗಿಲ್ಲ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಹರಿಯಾಣ, ಹೈದ್ರಾಬಾದ್​, ತೆಲಂಗಾಣ, ದೆಹಲಿ, ಪಂಜಾಬ್​, ಜಮ್ಮುವಿನಲ್ಲಿ ರೋಹಿಂಗ್ಯ ನಿರಾಶ್ರಿತರನ್ನು ಪತ್ತೆಹಚ್ಚಲು ವಿಶೇಷ ಗಮನ ನೀಡಬೇಕು.. ಅಲ್ಲದೆ ಅವರನ್ನು ಸ್ಕ್ರೀನಿಂಗ್​​ಗೆ ಒಳಪಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply