6 ದಿನಗಳಿಂದ ದೇಶದಲ್ಲಿ ನಿರಂತರವಾಗಿ ಸ್ಲೋ ಆಗ್ತಿದೆ ಕೊರೋನಾ!

masthmagaa.com:

ಆದ್ರೆ ಭಾರತದಲ್ಲಿ ನಿರಂತರವಾಗಿ ಕಡಿಮೆ ಪ್ರಮಾಣದಲ್ಲೇ ಲಸಿಕೆ ಹಾಕಲಾಗ್ತಿದೆ. ಕಳೆದ 6 ದಿನಗಳಿಂದ ಪ್ರತಿದಿನವೂ 20 ಲಕ್ಷ ಡೋಸ್​​ಗಿಂತ ಕಡಿಮೆ ಲಸಿಕೆ ಹಾಕಲಾಗ್ತಿದೆ. ಸೋಮವಾರ 15 ಲಕ್ಷ, ಮಂಗಳವಾರ 13 ಲಕ್ಷ, ಬುಧವಾರ ಅಂದ್ರೆ ನಿನ್ನೆ 12 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ನಿನ್ನೆ ಕೋವಿನ್ ವೆಬ್​​ ಪೋರ್ಟಲ್​​ನಲ್ಲಿರೋ ಮಾಹಿತಿ ಪ್ರಕಾರ ಅದರ ಒಟ್ಟು 754 ಜಿಲ್ಲೆಗಳ ಪೈಕಿ 92 ಜಿಲ್ಲೆಗಳಲ್ಲಿ ಒಂದೇ ಒಂದು ಡೋಸ್​ ಲಸಿಕೆ ಹಾಕಿಲ್ಲ.. ಅದ್ರಲ್ಲೂ ಗುಜರಾತ್​ನಲ್ಲಿ ಬರೀ 5 ಜಿಲ್ಲೆಗಳಲ್ಲಿ ಲಸಿಕೆ ಹಾಕಿದ್ರೆ, ತೆಲಂಗಾಣದಲ್ಲಿ ಮೂರೇ ಮೂರು ಜಿಲ್ಲೆಗಳಲ್ಲಿ ಲಸಿಕೆ ಹಾಕಲಾಗಿದೆ. ಹೀಗಾದ್ರೆ 3ನೇ ಅಲೆ ಬರೋ ಮುನ್ನ 3ನೇ 2ರಷ್ಟು ಜನಸಂಖ್ಯೆಗೆ ಲಸಿಕೆ ಹಾಕೋದಾದ್ರೂ ಹೇಗೆ ಅನ್ನೋ ಅನುಮಾನ ಮಾಡುತ್ತೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನೋಡಿದ್ರೆ ವರ್ಷಾಂತ್ಯದಲ್ಲಿ ಭಾರತದ ಬಲಿ 267 ಕೋಟಿ ಡೋಸ್ ಲಸಿಕೆ ಲಭ್ಯವಿರಲಿದೆ. ಕನಿಷ್ಠ ದೇಶದ ಎಲ್ಲಾ ವಯಸ್ಕರಿಗಾದ್ರೂ ಲಸಿಕೆ ಹಾಕೋ ಸ್ಥಿತಿಯಲ್ಲಿ ನಾವಿರ್ತೀವಿ ಅಂತ ಹೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply