ಭಾರತದಲ್ಲಿ 59 ಮಂದಿಗೆ ಕೊರೋನಾ ವೈರಸ್..!

masthmagaa.com:

ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಈಗ ದೇಶದಲ್ಲೂ ಭಾರಿ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಈಗಾಗಲೇ 59 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ನಮ್ಮ ರಾಜ್ಯದಲ್ಲೂ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಇಟಲಿಯಿಂದ ಕೇರಳಕ್ಕೆ ಬಂದಿಳಿದ 42 ಮಂದಿ ಪ್ರಯಾಣಿಕರನ್ನು ನೇರವಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಸೋಂಕು ಈಗ ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 1,10,000 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಇನ್ನು ಈಗಾಗಲೇ ಈ ಮಹಾಮಾರಿಗೆ ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ಮೃತಪಟ್ಟವರಲ್ಲಿ ಚೀನಾದವರೇ 3,158 ಮಂದಿ ಇದ್ದಾರೆ. ಇನ್ನು ಚೀನಾ ಬಳಿಕ 2ನೇ ಸ್ಥಾನದಲ್ಲಿ ಇಟಲಿ ಇದ್ದು, 631 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply