ಒಮೈಕ್ರಾನ್ ಇಳಿಯುತ್ತಿ.. ಹಳ್ಳಿ ಕಡೆ ಓಡುತ್ತಿದೆ! ಮುಂದೇನು?

masthmagaa.com:

ದೇಶದಲ್ಲಿ ಎದ್ದಿರೋ ಕೊರೋನಾ ಸೋಂಕಿನ ಮೂರನೇ ಅಲೆ ಫೆಬ್ರವರಿ 15ರಿಂದ ಕಮ್ಮಿಯಾಗಲಿದೆ ಅಂತ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಆಲ್ರೆಡಿ ವಿವಿಧ ರಾಜ್ಯಗಳಲ್ಲಿ, ವಿವಿಧ ನಗರಗಳಲ್ಲಿ ಕೊರೋನಾ ಪ್ರಕರಣ ಕಮ್ಮಿಯಾಗ್ತಿವೆ.
ದೇಶದಲ್ಲಿ ಇವತ್ತು 3.06 ಲಕ್ಷ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಿನ್ನೆಕ್ಕಿಂತ ಸ್ವಲ್ಪ ಕಮ್ಮಿ. ಇನ್ನು ಇವತ್ತು 439 ಜನ ಮೃತಪಟ್ಟಿದ್ದಾರೆ. ದೇಶದ ಪಾಸಿಟಿವಿಟಿ ದರ 20 ಪರ್ಸೆಂಟ್ ಇದೆ.
ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ವಾಪಸ್ ಪಡೆದ ಬಳಿಕ ಉಳಿದ ನಿರ್ಬಂಧಗಳನ್ನ ಕೂಡ ರಿಲ್ಯಾಕ್ಸ್ ಮಾಡ್ಬೇಕು ಅನ್ನೋ ಆಗ್ರಹ ಕೇಳಿ ಬರ್ತಿದೆ. ಈ ಬಗ್ಗೆ ಮಾತನಾಡಿರೋ ಸಿಎಂ ಬಸವರಾಜ ಬೊಮ್ಮಾಯಿ, ಪರಿಸ್ಥಿತಿ ನೋಡಿಕೊಂಡು ಇದರ ಬಗ್ಗೆಯೂ ನಿರ್ಧಾರ ತಗೋತೀವಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಒಮೈಕ್ರಾನ್ ರೂಪಾಂತರಿ ನೇತೃತ್ವದ ಈ ಅಲೆ ಮುಂದಿನ ಕೆಲ ವಾರಗಳಲ್ಲಿ ಸಣ್ಣ ನಗರಗಳು ಮತ್ತು ಗ್ರಾಮಗಳತ್ತ ಹರಡಲಿವೆ ಅಂತ ಕೇರಳದ ಐಎಂಎನಲ್ಲಿ ತಜ್ಞರಾಗಿರೋ ಡಾ.ರಾಜೀವ್ ಜಯದೇವನ್ ಹೇಳಿದ್ದಾರೆ. ಯಾವಾಗಲೂ ಸಾಂಕ್ರಾಮಿಕ ರೋಗಗಳ ಅಲೆಗಳು ಬಂದಾಗ ಮೊದಲು ಮೆಟ್ರೋ ಸಿಟಿಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮೊದಲು ಸೋಂಕು ಹೆಚ್ಚು ಹಾವಳಿ ಇಡುತ್ತೆ. ಆಮೇಲೆ ಗ್ರಾಮೀಣ ಭಾಗದತ್ತ ಬರುತ್ತೆ.. ಅದೇ ರೀತಿ ಒಮೈಕ್ರಾನ್ ಕೂಡ ಕೆಲವೇ ವಾರಗಳಲ್ಲಿ ಗ್ರಾಮೀಣ ಭಾಗದತ್ತ ಬರಲಿದೆ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply