ದೇಶದಲ್ಲಿ ಸಾಮುದಾಯಿಕ ಹಂತದಲ್ಲಿ ಒಮೈಕ್ರಾನ್!

masthmagaa.com:

ಭಾರತದ ಹಲವು ನಗರಗಳಲ್ಲಿ ಒಮೈಕ್ರಾನ್ ಸಮುದಾಯ ಹಂತ ತಲುಪಿದೆ ಅಂತ ಕೊರೋನಾದ ಜಿನೋಮಿಕ್ ಕನ್ಸೋರ್ಟಿಯಂ ಇನ್​ಸಾಕೋಗ್​​ ಹೇಳಿದೆ. ದೇಶದ ಕೆಲವು ನಗರಗಳಲ್ಲಿ ಒಮೈಕ್ರಾನ್ ತುಂಬಾ ವೇಗವಾಗಿ ಹರಡುತ್ತಿದೆ. ಒಟ್ಟು ಪ್ರಕರಣಗಳ ಪೈಕಿ ಇದೇ ಹೆಚ್ಚಾಗ್ತಿದೆ. ಇದ್ರರ್ಥ ಒಮೈಕ್ರಾನ್ ಸಾಮುದಾಯಿಕ ಮಟ್ಟದಲ್ಲಿ ಹರಡೋಕೆ ಶುರುವಾಗಿದೆ. ಇದ್ರ ಜೊತೆಗೆ ಒಮೈಕ್ರಾನ್​​ನ ಸಬ್​ ವೇರಿಯಂಟ್ ಬಿಎ.2 ಕೂಡ ಭಾರತದಲ್ಲಿ ಪತ್ತೆಯಾಗಿದ್ದು, ವೇಗವಾಗಿ ಹರಡುತ್ತಿದೆ ಅಂತ ಕೂಡ ತಿಳಿಸಿದೆ. ಆದ್ರೆ ಒಮೈಕ್ರಾನ್ ಪ್ರಕರಣಗಳಲ್ಲಿ ಈವರೆಗೆ ಲಕ್ಷಣರಹಿತ ಮತ್ತು ಮೈಲ್ಡ್​ ಆಗಿರೋ ಪ್ರಕರಣಗಳೇ ಜಾಸ್ತಿ ಪತ್ತೆಯಾಗಿವೆ ಅಂತ ತನ್ನ ಜನವರಿ 10ರ ವರದಿಯಲ್ಲಿ ತಿಳಿಸಿದೆ. ಆ ವರದಿಯನ್ನು ಇವತ್ತು ಬಿಡುಗಡೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply