ದೇಶದಲ್ಲಿ ಒಟ್ಟು 28 ಕೊರೋನಾ ಪ್ರಕರಣ ಪತ್ತೆ..!

ದೆಹಲಿ: ಭಾರತದಲ್ಲೂ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಆರೋಗ್ಯ ಸಚಿವ ಹರ್ಷವರ್ಧನ್​, ದೇಶದಲ್ಲಿ ಒಟ್ಟು 28 ಮಂದಿಯಲ್ಲಿ ಕೊರೋನಾವೈರಸ್ ಪತ್ತೆಯಾಗಿದೆ. ಅವರಲ್ಲಿ 16 ಮಂದಿ ವಿದೇಶಿ ಪ್ರಜೆಗಳಾಗಿದ್ದರೆ 12 ಮಂದಿ ಭಾರತೀಯರಾಗಿದ್ದಾರೆ ಅಂತ ತಿಳಿದುಬಂದಿದೆ.

ಐಟಿಬಿಪಿಗೆ 21 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 15 ಮಂದಿಯಲ್ಲಿ ಕೊರೋನಾವೈರಸ್ ಪತ್ತೆಯಾಗಿದೆ. ಅವರಲ್ಲಿ ಓರ್ವ ಭಾರತೀಯ ಮತ್ತು 14 ಮಂದಿ ಇಟಲಿಯ ಪ್ರವಾಸಿಗರು ಸೇರಿದ್ದಾರೆ. ಇನ್ನು ತೆಲಂಗಾಣದ ಓರ್ವ ಮತ್ತು ಕೇರಳದ ಮೂವರಲ್ಲಿ  ಕೊರೋನಾ ವೈರಸ್ ಪತ್ತೆಯಾಗಿದ್ದು, ಕೇರಳದ ಮೂವರು ಈಗಾಗಲೇ ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಅಂತ ತಿಳಿಸಿದ್ದಾರೆ.

-ಭಾರತದಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳು 28
-ಕೇರಳದಲ್ಲಿ ಮೂವರಲ್ಲಿ ಸೋಂಕು ಪತ್ತೆ, ಗುಣಮುಖರಾಗಿ ಡಿಸ್ಚಾರ್ಜ್​
-ದೆಹಲಿಯ ಒಬ್ಬರಲ್ಲಿ ಸೋಂಕು ಪತ್ತೆ, ಅವರಿಂದ ಅವರ 6 ಮಂದಿ ಸಂಬಂಧಿಕರಲ್ಲೂ ಪತ್ತೆ
-ತೆಲಂಗಾಣದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆ
-ಇಟಲಿಯಿಂದ ಬಂದ ಒಟ್ಟು 17 ಜನರಲ್ಲಿ ಸೋಂಕು ಪತ್ತೆ(16 ಮಂದಿ ಇಟಲಿ ಪ್ರವಾಸಿಗರು, ಓರ್ವ ಭಾರತೀಯ )
-ಸದ್ಯ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 25

Contact Us for Advertisement

Leave a Reply