masthmagaa.com:

ದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್​​ ಬಳಕೆಗೆ ಅನುಮತಿ ನೀಡಿರೋದಕ್ಕೆ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಲಸಿಕೆಯ ಬಳಕೆಗೆ ಅನುಮತಿ ನೀಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಲಸಿಕೆಯ 3 ಹಂತಗಳ ಪ್ರಯೋಗ ಕಡ್ಡಾಯವಾಗಿದ್ದು, ಪ್ರಯೋಗಗಳ ಡಾಟಾ ಪರಿಶೀಲಿಸದೇ ಯಾವುದೇ ದೇಶ ಲಸಿಕೆ ಬಳಕೆಗೆ ಅನುಮತಿ ನೀಡಿಲ್ಲ.. ಆದ್ರೆ ಭಾರತ್ ಬಯೋಟೆಕ್ ಇನ್ನೂ ಕೂಡ 3ನೇ ಹಂತ ಪೂರ್ಣಗೊಳಿಸಿಲ್ಲ. ಜೊತೆಗೆ ಅದರ ಸುರಕ್ಷತೆ ಮತ್ತು ಪರಿಣಾಮದ ಕುರಿತ ದಾಖಲೆಗಳನ್ನು ಕೂಡ ಪರಿಶೀಲನೆ ನಡೆಸಲಾಗಿಲ್ಲ.. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೋವ್ಯಾಕ್ಸಿನ್​​​ ಬಳಕೆಗೆ ಹೇಗೆ ಅನುಮತಿ ನೀಡಲಾಯ್ತು ಅಂತ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತೂರೂರ್ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೋವ್ಯಾಕ್ಸಿನ್ ಇನ್ನೂ ಕೂಡ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿಲ್ಲ. ಹೀಗಿರುವಾಗ ಅದಕ್ಕೆ ಗ್ರೀನ್ ಸಿಗ್ನಲ್ ನೀಡಿರೋದು ಅಪೂರ್ಣ ಮತ್ತು ಅಪಾಯಕಾರಿಯಾಗಲಿದೆ ಅಂತ ಹೇಳಿದ್ದಾರೆ. ಜೊತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸದ್ಯ ಆಕ್ಸ್​ಫರ್ಡ್​ ಲಸಿಕೆಯನ್ನು ಆರಂಭಿಸಿ, 3ನೇ ಹಂತ ಪೂರ್ಣಗೊಳಿಸಿದ ಬಳಿಕ ಕೋವ್ಯಾಕ್ಸಿನ್ ಬಳಕೆ ಆರಂಭಿಸಬಹುದು ಅಂತ ಸಲಹೆ ನೀಡಿದ್ದಾರೆ.

-masthmagaa.com

 

 

Contact Us for Advertisement

Leave a Reply