ಕೊರೋನಾ ವೈರಸ್​​..ಚಿಕಿತ್ಸೆ ನೀಡದಿದ್ರೆ ಕೊಂದು ಬಿಡ್ತೀನಿ ಎಂದ ರೋಗಿ..!

ಕೊರೋನಾವೈರಸ್​​ ಜಗತ್ತಿನಾದ್ಯಂತ ಭಾರಿ ಪ್ರಮಾಣದಲ್ಲಿ ಹರಡುತ್ತಿದೆ. ಈಗಾಗಲೇ 11,943 ಮಂದಿಯಲ್ಲಿ ಈ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡಿದ್ದು, ಅವರಲ್ಲಿ 11,791 ಮಂದಿ ಚೀನಾದವರೇ ಸೇರಿದ್ಧಾರೆ. ಅಲ್ಲದೆ ದರಿದ್ರ ವೈರಲ್​​​​ಗೆ ಈಗಾಗಲೇ ಬರೋಬ್ಬರಿ 259 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ರೋಗಿಗಳನ್ನು ಹೊರತುಪಡಿಸಿ ಇಲ್ಲಿನ ವೈದ್ಯರ ಪರಿಸ್ಥಿತಿ ಇನ್ನೂ ಗಂಭೀರ ಸ್ಥಿತಿಯಲ್ಲಿದೆ. ಅದರಲ್ಲೂ ವುಹಾನ್​​ನಲ್ಲಿ ವೈದ್ಯರ ಮೇಲೆ ಹಲ್ಲೆ ಕೂಡ ಶುರುವಾಗಿದೆ. ವೈದ್ಯರ ಪರಿಸ್ತಿತಿಗೆ ಹೇಗಾಗಿದೆ ಅಂದ್ರೆ ಹೆಚ್ಚಿನ ವೈದ್ಯರು ಕಳೆದೊಂದು ವಾರದಿಂದ ಮನೆಗಳಿಗೂ ಹೋಗದೇ ಕರ್ತವ್ಯ ನಿರತರಾಗಿದ್ದಾರೆ. ಆದ್ರೆ ಕೊರೋನಾವೈರಸ್​​ನಿಂದ ಪೀಡಿತರಾಗಿರುವ ರೋಗಿಗಳು ಮಾತ್ರ ವೈದ್ಯರ ಮೇಲೆ ಜೀವ ಬೆದರಿಕೆ ಹಾಕ್ತಿದ್ಧಾರೆ. ಅಲ್ಲದೆ ನಮಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದರೆ, ನಾವು ಸಾಯೋ ಮುನ್ನ ನಿಮ್ಮನ್ನು ಸಾಯಿಸುತ್ತೇವೆ ಎಂದು ಬೆದರಿಸಿದ್ದಾರೆ.

ವುಹಾನ್​​ನಲ್ಲಿ ಪ್ರತಿಕ್ರಿಯಿಸಿದ ವೈದ್ಯರೊಬ್ಬರು, ನಾನು ಕಳೆದ 2 ತಿಂಗಳಿಂದ ಮನೆಗೆ ಹೋಗಿಲ್ಲ. ಮಧ್ಯರಾತ್ರಿಯಾದ್ರು ಕೊರೋನಾ ವೈರಸ್​ ಪೀಡಿತರ ನೂರಾರು ಜನ ಕ್ಯೂನಲ್ಲಿ ನಿಂತಿರುತ್ತಾರೆ. ಎಲ್ಲಾ ರೋಗಿಗಳು ಬೇಸರಗೊಂಡಿದ್ದಾರೆ. ಹೀಗಾಗಿಯೇ ಕೊಲೆಯ ಮಾತಾಡುತ್ತಿದ್ಧಾರೆ. ಆದ್ರೆ ನಮ್ಮನ್ನು ಕೊಲ್ಲೋದ್ರಿಂದ ಲೈನ್ ಕಡಿಮೆಯಾಗಲ್ಲ ಅಂತ ತಿಳಿಸಿದ್ಧಾರೆ.

Contact Us for Advertisement

Leave a Reply