ಕೊರೋನಾ ತಡೆಯುವಲ್ಲಿ ವಿಫಲ: ಚೀನಾದ 30 ಅಧಿಕಾರಿಗಳಿಗೆ ಶಿಕ್ಷೆ!

masthmagaa.com:

ಕೊರೋನಾದ ಹುಟ್ಟೂರು ಚೀನಾದಲ್ಲಿ ದಿನೇ ದಿನೇ ಡೆಲ್ಟಾ ಪರಾಕ್ರಮ ಜೋರಾಗ್ತಿದೆ. ಕಳೆದ 24 ಗಂಟೆಗಳಲ್ಲಿ 125 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಅವರಲ್ಲಿ 94 ಮಂದಿ ಚೀನೀಯರೇ ಆಗಿದ್ರೆ, 31 ಮಂದಿ ಹೊರಗಿನಿಂದ ಬಂದವರಾಗಿದ್ದಾರೆ. ಇದ್ರ ಬೆನ್ನಲ್ಲೇ ಕೊರೋನಾ ನಿರ್ವಹಣೆಯಲ್ಲಿ ವಿಫಲರಾದ ಆರೋಪದ ಮೇಲೆ 30 ಮಂದಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕೆಲವರಿಗೆ ಶಿಕ್ಷೆ ನೀಡಿದ್ರೆ, ಇನ್ನು ಕೆಲವರನ್ನು ಕೆಲಸದಿಂದಲೇ ತೆಗೆದು ಹಾಕಲಾಗಿದೆ. ಉಪ ಮೇಯರ್​​ಗಳು, ಜಿಲ್ಲಾ ಮುಖ್ಯಸ್ಥರು, ಹೆಲ್ತ್ ಕಮಿಷನ್, ಹಾಸ್ಪಿಟಲ್ ಮ್ಯಾನೇಜ್ಮೆಂಡ್ ಸಿಬ್ಬಂದಿ, ಏರ್​ಪೋರ್ಟ್​ ಮತ್ತು ಟೂರಿಸಂ ಡಿಪಾರ್ಟ್​​​ಮೆಂಟ್​​ ಅಧಿಕಾರಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೊರೋನಾ ಹೆಚ್ಚುತ್ತಿರುವ ಬೆನ್ನಲ್ಲೇ ವುಹಾನ್ ನಗರದ ಎಲ್ಲಾ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಮಂಗಳವಾರ ಪರೀಕ್ಷೆ ನಡೆಸೋಕೆ ಶುರು ಮಾಡಲಾಗಿತ್ತು. ಈ ನಗರದಲ್ಲಿ 6 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಬಿಟ್ಟು ಎಲ್ಲಾ 1.1 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇನ್ನು ಫ್ರಾನ್ಸ್​ನಲ್ಲಿ ಕೊರೋನಾ ತಡೆಗೆ, ಲಸಿಕೆ ಅಭಿಯಾನವನ್ನು ಹೆಚ್ಚಿಸಲು ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಸರ್ಕಾರ ಹೊಸ ಪ್ಲಾನ್ ಮಾಡಿದೆ. ರೆಸ್ಟೋರೆಂಟ್​​​, ಇಂಟರ್​ಸಿಟಿ ಟ್ರೈನ್​​​ನಂತ ಸಾಮಾಜಿಕ ಸ್ಥಳಗಳಲ್ಲಿ ಇನ್ಮುಂದೆ ಹೆಲ್ತ್ ಪಾಸ್ ಕಡ್ಡಾಯವಾಗಿದೆ. ಲಸಿಕೆ ಹಾಕಿಸಿಕೊಂಡವರಿಗೆ ಈ ಪಾಸ್ ನೀಡಲು ನಿರ್ಧರಿಸಲಾಗಿದೆ. ಇದ್ರಿಂದ ಹೆಚ್ಚೆಚ್ಚು ಜನ ಲಸಿಕೆ ಹಾಕಿಸಕೊಳ್ತಾರೆ ಅನ್ನೋದು ಲೆಕ್ಕಾಚಾರ.. ಆದ್ರೆ ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಆದ್ರೂ ಕೂಡ ಜಾರಿ ಮಾಡಲಾಗಿದೆ.
ಅತ್ತ ಅಮೆರಿಕದಲ್ಲಿ ಡೆಲ್ಟಾ ಹಾವಳಿ ಜೋರಾಗಿದೆ. ದಿನೆ ದಿನೇ ಕೇಸ್ ಜಾಸ್ತಿಯಾಗ್ತಿದೆ. 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗ್ತಿವೆ.

-masthmagaa.com

Contact Us for Advertisement

Leave a Reply