130 ದಿನಗಳ ಬಳಿಕ ಈ ದಾಖಲೆ ಬರೆದ ಕೊರೋನಾ ವೈರಸ್!

masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಜೋರಾಗೇ ಏಳೋ ಲಕ್ಷಣ ಕಾಣ್ತಿದೆ. ಯಾಕಂದ್ರೆ ಕಳೆದ 24 ಗಂಟೆಗಳಲ್ಲಿ 47,262 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 275 ಸೋಂಕಿತರು ಮೃತಪಟ್ಟಿದ್ದಾರೆ. ಇಷ್ಟು ಜನರಿಗೆ ಸೋಂಕು ತಗುಲಿರೋದು 130 ದಿನಗಳ ಬಳಿಕ ಇದೇ ಮೊದಲು. ಈ ಹಿಂದೆ 2020ರ ನವೆಂಬರ್ ಆರಂಭದಲ್ಲಿ 47 ಸಾವಿರ ಜನರಿಗೆ ಸೋಂಕು ತಗುಲಿತ್ತು.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 28,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಪಂಜಾಬ್, ಕರ್ನಾಟಕ, ಗುಜರಾತ್​, ಛತ್ತೀಸ್​ಗಢ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕೊರೋನಾ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply