2031ಕ್ಕೆ ಭಾರತ ಅಪ್ಪರ್‌ ಮಿಡ್ಸ್‌ ಇನ್‌ಕಮ್‌ ದೇಶ: ಕ್ರೈಸಿಲ್‌ ಭವಿಷ್ಯ

masthmagaa.com:

2031ರ ಹೊತ್ತಿಗೆ ಭಾರತ ಅಪ್ಪರ್‌ ಮಿಡ್ಲ್‌ ಇನ್‌ಕಮ್‌ ದೇಶ ಆಗುತ್ತೆ ಅಂತ ರೇಟಿಂಗ್‌ ಏಜೆನ್ಸಿ ಕ್ರೈಸಿಲ್‌ ತನ್ನ ಔಟ್‌ಲುಕ್‌ ರಿಪೋರ್ಟ್‌ನಲ್ಲಿ ಹೇಳಿದೆ. ಅಲ್ಲದೆ ಅದೇ ಸಮಯಕ್ಕೆ ಭಾರತದ ಎಕಾನಮಿ ಡಬಲ್‌ ಆಗಿ ₹7 ಟ್ರಿಲಿಯನ್‌ ತಲುಪುತ್ತೆ ಅಂತೇಳಿದೆ. ಬರುವ ವರ್ಷಗಳಲ್ಲಿ 6.8% ಬೆಳವಣಿಗೆ ದರದ ಸಹಾಯದಿಂದ ಭಾರತದ ಆರ್ಥಿಕತೆಯಲ್ಲಿ ಗಣನೀಯ ಬೆಳವಣಿಗೆ ಕಾಣಲಿದೆ. ಮುಂದಿನ 7 ಆರ್ಥಿಕ ವರ್ಷಗಳಲ್ಲಿ ಭಾರತದ ಆರಾಮಾಗಿ ₹5 ಟ್ರಿಲಿಯನ್‌ ಗುರಿ ತಲುಪಲಿದೆ ಅಂತ ಕ್ರೈಸಿಲ್‌ ಹೇಳಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌, ಇವಿ, ಎನರ್ಜಿ ಟ್ರಾನ್ಸಿಶನ್‌ ಸೆಕ್ಟರ್‌ಗಳು ಬೇರೆ ಸೆಕ್ಟರ್‌ಗಳಿಗಿಂತ ವೇಗವಾಗಿ ಬೆಳೀತಿವೆ. 2023-24ರಲ್ಲಿ ಈ ವಲಯಗಳು 16% ಬಂಡವಾಳ ಹೂಡಿಕೆ ಕಂಡಿವೆ. ಈ ಟ್ರೆಂಡ್‌ ಭಾರತದ ಆರ್ಥಿಕತೆಗೆ ವರದಾನ ಆಗ್ಲಿದೆ ಅಂತ ಕ್ರೈಸಿಲ್‌ ಹೇಳಿದೆ.

-masthmagaa.com

Contact Us for Advertisement

Leave a Reply