ಹೈಟಿಯಲ್ಲಿ ಭೂಕಂಪಕ್ಕೆ 1297 ಮಂದಿ ಬಲಿ!

masthmagaa.com:

ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1297ಕ್ಕೆ ಏರಿಕೆಯಾಗಿದೆ. 5,700 ಮಂದಿಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗಳೆಲ್ಲಾ ಗಾಯಾಳುಗಳಿಂದ ತುಂಬಿಹೋಗಿದ್ದು, ಚಿಕಿತ್ಸೆ ಕೊಡೋಕೆ ವೈದ್ಯಕೀಯ ಸಿಬ್ಬಂದಿ ಪರದಾಡ್ತಿದ್ದಾರೆ. 13,600 ಕಟ್ಟಡಗಳು ನೆಲಸಮವಾದ್ರೆ, 13,700 ಕಟ್ಟಡಗಳಿಗೆ ಡ್ಯಾಮೇಜ್ ಆಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿನ ಲೆಸ್ ಕಾಯೆಸ್ ಸೇರಿದಂತೆ ಹಲವು ಭಾಗಗಳಲ್ಲಿ ಜನ ಮನೆ ಕುಸಿಯಬಹುದು ಅನ್ನೋ ಭೀತಿಯಲ್ಲಿ ರಾತ್ರಿ ವೇಳೆ ಮನೆ ಮುಂದಿನ ಅಂಗಳದಲ್ಲಿ ಮಲಗುತ್ತಿದ್ದಾರೆ. ಆಗಸ್ಟ್​ 14ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

-masthmagaa.com

 

Contact Us for Advertisement

Leave a Reply