ಧನ್ಯಾ ರಾಮ್‌ಕುಮಾರ್‌ 5ನೇ ಸಿನಿಮಾಕ್ಕೆ ಸಾಥ್‌ ನೀಡಿದ ಶ್ರೀಮುರಳಿ !

masthmagaa.com:

ಖ್ಯಾತ ನಟ ಡಾ. ರಾಜುಕುಮಾರ್‌ ಅವರ ಮೊಮ್ಮಗಳು ಧನ್ಯಾ ರಾಮಕುಮಾರ್‌ ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ʻನಿನ್ನ ಸನಿಹಕೆʼ ಸಿನಿಮಾ ಮೂಲಕ ಧನ್ಯಾ ರಾಮ್‌ಕುಮಾರ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ʻಕಾಲಾಪತ್ಥರ್‌ʼ ಹಾಗೂ ʻಹೈಡ್ ಆ್ಯಂಡ್ ಸೀಕ್ʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಧನ್ಯಾ ರಾಮ್‌ಕುಮಾರ್‌ 5ನೇ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ. ಇದೀಗ ಸಿನಿಮಾದ ಟೈಟಲ್‌ ರಿವೀಲ್‌ ಮಾಡಲಾಗಿದೆ. ನಟ ಶ್ರೀಮುರಳಿ ಈ ಸಿನಿಮಾದ ಟೈಟಲ್‌ ಅನಾವರಣ ಮಾಡಿದ್ದಾರೆ. ಧನ್ಯಾ ರಾಮ್‌ಕುಮಾರ್‌ ಅವರ 5ನೇ ಸಿನಿಮಾದ ಟೈಟಲ್‌ನ್ನುʻಎಲ್ಲಾ ನಿನಗಾಗಿʼ ಎಂದು ಇಡಲಾಗಿದೆ.

ಕಾಶಿ ನಿರ್ದೇಶನ ಮಾಡುತ್ತಿರುವ ʻʻಎಲ್ಲಾ ನಿನಗಾಗಿʼ ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್‌ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿ ಧನ್ಯಾ ರಾಮ್‌ಕುಮಾರ್‌ಗೆ ನಾಯಕನಾಗಿ ರಾಹುಲ್‌ ಆರ್ಕಟ್‌ ನಟಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply