ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ!!

masthmagaa.com:

ಹಿರಿಯ ನಟ ದ್ವಾರಕೀಶ್ ಅವರ ಧರ್ಮಪತ್ನಿ ಅಂಬುಜಾ ದ್ವಾರಕೀಶ್ ಅವರು ಇಂದು ಮಧ್ಯಾಹ್ನ ಸುಮಾರು 2 ಗಂಟೆಗೆ ತಮ್ಮ ಕೊನಯುಸಿರೆಳೆದಿದ್ದಾರೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಿಂದ ಬಳಲುತ್ತಿದ್ದ ಅಂಬುಜಾ ಅವರಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಪತಿ ದ್ವಾರಕೀಶ್ ಮತ್ತು ಐದು ಜನ ಗಂಡು ಮಕ್ಕಳನ್ನು ಆಗಲಿರುವ ಅಂಬುಜಾ ದ್ವಾರಕೀಶ್ ಅವರ ಸಾವನ್ನಪ್ಪಿದ ವಿಷಯವನ್ನು ದ್ವಾರಕೀಶ್ ಅವರ ಪುತ್ರ, ನಟ, ನಿರ್ಮಾಪಕ ಯೋಗೀಶ್ ದ್ವಾರಕೀಶ್ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply