ಬೆಂ.ಗ್ರಾಮಾಂತರ ದಿಂದ ಡಿ.ಕೆ.ಸು, ಹಾಸನದಿಂದ ಪ್ರಜ್ವಲ್‌ ರೇವಣ್ಣ ಕಣಕ್ಕೆ!

masthmagaa.com:

ರಾಜ್ಯದ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಮುಖವಾಗಿ ಈ ಬಾರಿ ರಾಜ್ಯದ ಹೈವೊಲ್ಟೇಜ್ ಕ್ಷೇತ್ರವಾಗಿರೊ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿಕೆ ಸುರೇಶ್‌ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸುರೇಶ್‌ ಅವ್ರಿಗೆ ಅವ್ರ ಸಹೋದರ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರರು ಸಾಥ್‌ ನೀಡಿದ್ರು. ಈ ವೇಳೆ 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಘೋಷಿಸಿಕೊಂಡಿರುವುದು ಮತ್ತು ಈಗ ತೋರಿಸಿರುವುದು ನೋಡಿದರೆ 5 ವರ್ಷಗಳಲ್ಲಿ ಬರೋಬ್ಬರಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಅಫಿಡವಿಟ್‌ನಲ್ಲಿ ತಾವೊಬ್ಬ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಂತ ಹೇಳ್ಕೊಂಡಿದ್ದಾರೆ. ಆದ್ರೆ ತಮ್ಮ ಬಳಿ ಯಾವುದೇ ವಾಹನ ಇಲ್ಲ ಅಂತ ಹೇಳ್ಕೊಂಡಿದ್ದಾರೆ. ಡಿಕೆ ಸುರೇಶ್‌ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಇದೆ. ಇದರಲ್ಲಿ ಬ್ಯಾಂಕ್‌ ಖಾತೆಯಲ್ಲಿ 16.61 ಕೋಟಿ ರೂ., ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂ. ಇದೆ. ಇನ್ನು ಕ್ವಾರಿ ಲೀಸ್‌ಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದರಲ್ಲಿ ಅಣ್ಣ ಡಿಕೆ ಶಿವಕುಮಾರ್‌ಗೆ 30.08 ಕೋಟಿ ರೂ. ಸಾಲ ನೀಡಿದ್ದರೆ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ., ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್‌ ಶಾಸಕ ರಂಗನಾಥ್‌ ಪತ್ನಿ ಡಾ. ಸುಮಾ ರಂಘನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ. ಜೊತೆಗೆ ಸ್ಥಿರಾಸ್ತಿ 486.33 ಕೋಟಿ ಇದೆ ಅಂತ ಹೇಳಿದ್ದಾರೆ.


ಅತ್ತ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ತಮ್ಮ ನಾಮಿನೇಶನ್‌ ಫೈಲ್‌ ಮಾಡಿದ್ದಾರೆ. ಹಾಸನ ಡಿಸಿ ಆಫೀಸ್‌ಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಪ್ರಜ್ವಲ್‌ ಅವ್ರ ತಂದೆ, ಶಾಸಕ HD ರೇವಣ್ಣ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವ್ರು ಕೂಡ 40.84 ಕೋಟಿ ರೂ. ಆಸ್ತಿ ಹೊಂದಿರೋದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ ಉತ್ತರಕನ್ನಡದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರೊ ಮಾಜಿ ಸ್ವೀಕರ್‌ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವ್ರಿಗೆ ಹಾಲಿ ಸಂಸದ ಅನಂತ್‌ ಕುಮಾರ್‌ ಹೆಗ್ದೆ ಸೇರಿದಂತೆ ಸ್ಥಳೀಯ ಬಿಜೆಪಿ ಶಾಸಕರು ಸರಿಯಾಗಿ ರೆಸ್ಪಾಂಡ್‌ ಮಾಡ್ತಿಲ್ಲ ಅಂತ ಮಾಹಿತಿ ಲಭ್ಯ ಆಗಿದೆ. ಅಲ್ದೇ ಅನಂತ್‌ಕುಮಾರ್‌ ಮನೆ ಮುಂದೆ ಕಾಗೇರಿ ಅರ್ಧ ಗಂಟೆ ವೇಟ್‌ ಮಾಡಿದ್ರು ಅನಂತ ಅವ್ರ ಮನೆಯ ಗೇಟ್‌ ಕೂಡ ಓಪನ್‌ ಮಾಡಿಲ್ಲ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply