ಕಲಬುರಗಿ ವೃದ್ಧನಿಗೆ ಚಿಕಿತ್ಸೆ ನೀಡಿದ ಡಾಕ್ಟರ್​ಗೂ ಕೊರೋನಾ..!

masthmagaaa.com:

ಕೊರೋನಾ ವೈರಸ್​​ಗೆ ಕಲಬುರಗಿಯ 76 ವರ್ಷದ ವೃದ್ಧ ದೇಶದಲ್ಲಿ ಮೊದಲ ಬಲಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದರ ನಡುವೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕಲಬುರಗಿಯ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದನ್ನ ಕಲಬುರಗಿ ಜಿಲ್ಲಾಧಿಕಾರಿ ಶರತ್ ಖಚಿತಪಡಿಸಿದ್ದಾರೆ. ಸದ್ಯ 63 ವರ್ಷದ ವೈದ್ಯ ಹಾಗೂ ಆತನ ಕುಟುಂಬಸ್ಥರನ್ನ ಮನೆಯಲ್ಲಿರಿಸಿ, ತೀವ್ರ ನಿಗಾ ಇಡಲಾಗಿದೆ. ಇವತ್ತು ಅವರನ್ನ ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗುವುದು ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply