masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಾದ ಸೋಲನ್ನು ಒಪ್ಪಿಕೊಳ್ಳದೆ, ಜೋ ಬೈಡೆನ್​ಗೆ ಅಧಿಕಾರವನ್ನ ಹಸ್ತಾಂತರಿಸದೆ ಸತಾಯಿಸುತ್ತಿರುವ ಡೊನಾಲ್ಡ್ ಟ್ರಂಪ್ ಕೊನೆಗೂ ವೈಟ್​ಹೌಸ್​ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಎಲೆಕ್ಟೊರಲ್​ ಕಾಲೇಜ್ ವೋಟ್​ಗಳು ಜೋ ಬೈಡೆನ್​ ಪರವಾಗಿ ಹೋದ್ರೆ ಖಂಡಿತವಾಗಿಯೂ ಶ್ವೇತಭವನವನ್ನು ಬಿಟ್ಟು ಹೋಗ್ತೀನಿ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ. ಚುನಾವಣೆ ಬಳಿಕ ಮಾಧ್ಯಮವರಿಂದ ಟ್ರಂಪ್​ ಪ್ರಶ್ನೆಗಳನ್ನ ಎದುರಿಸಿದ್ದು ಇದೇ ಮೊದಲು. ಇನ್ನು ಜನವರಿ 20ರಂದು ನಡೆಯಲಿರುವ ಬೈಡೆನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸ್ತೀರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಲು ಟ್ರಂಪ್ ನಿರಾಕರಿಸಿದ್ದಾರೆ. ಅದರ ಬದಲಾಗಿ ಸೋಲನ್ನ ಒಪ್ಪಿಕೊಳ್ಳೋದು ತುಂಬಾ ಕಷ್ಟದ ವಿಚಾರ ಅಂತ ಹೇಳಿದ್ದಾರೆ.

ಅಂದ್ಹಾಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋಸೆಫ್ ಬೈಡೆನ್ 306 ಎಲೆಕ್ಟೊರಲ್ ಕಾಲೇಜ್ ವೋಟ್​ಗಳನ್ನ ಪಡೆದ್ರೆ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್ 232 ಮತಗಳನ್ನ ಪಡೆದಿದ್ದಾರೆ. ಚುನಾವಣೆ ಗೆಲ್ಲಲು ಮ್ಯಾಜಿಕ್ ನಂಬರ್ 270 ದಾಟಬೇಕು. ಬೈಡೆನ್ ಅದನ್ನ ದಾಟಿರೋದ್ರಿಂದ ಅವರನ್ನ ಪ್ರೆಸಿಡೆಂಟ್​-ಎಲೆಕ್ಟ್ ಅಂತ ಕರೀತಾರೆ. ಆದ್ರೆ ಚುನಾವಣಾ ಫಲಿತಾಂಶ ಅಧಿಕೃತವಾಗಿ ಇನ್ನೂ ಘೋಷಣೆ ಆಗಿಲ್ಲ.

-masthmagaa.com

Contact Us for Advertisement

Leave a Reply