ಕತ್ತೆಗಳು ಸಾರ್ ಕತ್ತೆಗಳು ಅಂತಿರೋದ್ಯಾಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್?

masthmagaa.com:

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಕತ್ತೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಮೂರು ವರ್ಷಗಳಿಂದ ಪ್ರತಿವರ್ಷ ಕತ್ತೆಗಳ ಸಂಖ್ಯೆಯಲ್ಲಿ ಒಂದೊಂದು ಲಕ್ಷ ಏರಿಕೆಯಾಗ್ತಾ ಬಂದಿದೆ. ಸದ್ಯ ದೇಶದಲ್ಲಿ ಒಟ್ಟು ಕತ್ತೆಗಳ ಸಂಖ್ಯೆ 56 ಲಕ್ಷಕ್ಕೆ ಏರಿಕೆಯಾಗಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಕತ್ತೆಗಳಿರೋ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. 2021ರ ಆರ್ಥಿಕ ಸಮೀಕ್ಷೆ ಪ್ರಕಾರ ಪಾಕಿಸ್ತಾನದಲ್ಲಿ 2001-2002ರಿಂದ ಪ್ರತಿ ವರ್ಷವೂ 1 ಲಕ್ಷದಂತೆ ಕತ್ತೆಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಉಳಿದ ಪ್ರಾಣಿಗಳ ಸಂಖ್ಯೆ ಮಾತ್ರ ಸ್ಥಿರವಾಗಿಯೇ ಇದೆ. ಪಾಕಿಗಳ ಕಥೆ ಇಷ್ಟಕ್ಕೆ ಮುಗಿಯಲ್ಲ.. ಚೀನಾ ಜೊತೆ ಮಾಡಿಕೊಂಡಿರೋ ಒಪ್ಪಂದವೊಂದರ ಪ್ರಕಾರ ಪಾಕಿಸ್ತಾನ ಚೀನಾಗೆ ಪ್ರತಿ ವರ್ಷ 80 ಸಾವಿರ ಕತ್ತೆಗಳನ್ನು ಕಳುಹಿಸುತ್ತೆ. ಮಾಂಸ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಚೀನೀಯರು ಇದನ್ನು ಬಳಸ್ತಾರೆ. ಇದ್ರ ಚರ್ಮದಿಂದ ಬಿಡುಗಡೆಯಾಗೋ ಜಿಲೆಟಿನ್​​ನನ್ನು ಹಲವು ಬಗೆಯ ಔಷಧಗಳಲ್ಲೂ ಬಳಸ್ತಾರೆ. ಪಾಕಿಸ್ತಾನದಲ್ಲಿ ಒಂದು ಕತ್ತೆ ಬೆಲೆ 15ರಿಂದ 20 ಸಾವಿರ ರೂಪಾಯಿವರೆಗೆ ಇದೆ. ಹೀಗಾಗಿ ಕತ್ತೆ ಮಾರಾಟ ಮಾಡಿ ಒಳ್ಳೆ ಲಾಭ ಮಾಡ್ಕೊಳ್ತಿದೆ ಪಾಕಿಸ್ತಾನ. ಎಷ್ಟರ ಮಟ್ಟಿಗೆ ಅಂದ್ರೆ ಪಾಕ್​​ನಲ್ಲಿ ಕತ್ತೆಗಳಿಗೆ ಸಪರೇಟ್ ಆಗಿ ಆಸ್ಪತ್ರೆ ಕೂಡ ನಿರ್ಮಿಸಲಾಗಿದೆ. ಇನ್ನು ಕತ್ತೆ ಹಾಲಿಗೂ ತುಂಬಾ ಡಿಮ್ಯಾಂಡ್ ಇದೆ.. ಈ ಸಂಬಂಧ ನಾವು ಈ ಹಿಂದೆಯೂ ಒಂದು ವಿಡಿಯೋ ಮಾಡಿದ್ವಿ.. ವಿಡಿಯೋ ಕೊನೆಗೆ ಸ್ಕ್ರೀನ್​​ಮೇಲೆ ಲಿಂಕ್ ಬರುತ್ತೆ ಆ ಮೂಲಕ ನೀವು ನೋಡ್ಬೋದು.

-masthmagaa.com

Contact Us for Advertisement

Leave a Reply