masthmagaa.com:

ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ ಗರಿಗೆದರಿದ್ದು 4ನೇ ವರ್ಷದ ದೀಪೋತ್ಸವಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸರಳ ರೀತಿಯಲ್ಲಿ ಚಾಲನೆ ನೀಡಿದ್ದಾರೆ. ಈ ಸಲದ ದೀಪೋತ್ಸವದ ವಿಶೇಷ ಅಂದ್ರೆ, ದೇವಾಲಯದ ಸುತ್ತಲೂ 28 ಘಾಟ್‌ಗಳಲ್ಲಿ 5.51 ಲಕ್ಷ ದೀಪಗಳನ್ನ ಬೆಳಗಲಾಗಿದೆ. ಈ ಮೂಲಕ ಗಿನ್ನಿಸ್‌ ದಾಖಲೆ ಬರೆಯಲಾಗಿದೆ. ಇದಕ್ಕಾಗಿ ಡಾ. ರಾಮ್‌ ಮನೋಹರ್‌ ಲೋಹಿಯಾ ಅವಧ್‌ ಯುನಿವರ್ಸಿಟಿಯ 8,001 ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಾಗಿದೆ. ದೀಪೋತ್ಸವ ಪ್ರಯುಕ್ತ ಸರಯು ನದಿ ತೀರದಲ್ಲಿ ಲೇಸರ್‌ ಶೋ ವ್ಯವಸ್ಥೆ ಕೂಡ ಮಾಡಲಾಗಿದೆ. ಕೊರೋನಾ ಕಾರಣದಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು,‌ ಜನತೆಗಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದೀಪೋತ್ಸವದ ದರ್ಶನ ಕಲ್ಪಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ದೀಪೋತ್ಸವ ಇದಾಗಿದೆ. ಹೀಗಾಗಿ ಡಬಲ್‌ ಸಂಭ್ರಮ ಮನೆಮಾಡಿದೆ. ಮತ್ತೊಂದುಕಡೆ ಉತ್ತರಾಖಂಡ್​ನ ಕೇದಾರನಾಥ ದೇವಾಲಯ ಮತ್ತು ಗುಜರಾತ್​ನ ಅಕ್ಷರಧಾಮ ಕೂಡ ಕಲರ್‌ಫುಲ್‌ ಲೈಟಿಂಗ್​ನಿಂದ ಕಂಗೊಳಿಸುತ್ತಿದೆ.

-masthmagaa.com

Contact Us for Advertisement

Leave a Reply