ಬಿಟ್​​ ಕಾಯಿನ್​​ಗೆ ಕಾನೂನಿನ ಮಾನ್ಯತೆ ನೀಡಿದ ದೇಶ ಯಾವುದು ಗೊತ್ತಾ?

masthmagaa.com:

ಇವತ್ತು ಬಿಟ್ ಕಾಯಿನ್ ಗೆ ಸಂಬಂಧಪಟ್ಟ ಹಾಗೆ ಮಹತ್ವದ ಬೆಳವಣಿಗೆ ಆಗಿದೆ. ಮಧ್ಯ ಅಮೆರಿಕದ ಎಲ್ ಸಾಲ್ವಡಾರ್ ದೇಶ ಬಿಟ್ ಕಾಯಿನ್ ಗೆ ಕಾನೂನಿನ ಮಾನ್ಯತೆ ನೀಡಿದೆ. ಈ ಮೂಲಕ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಅನ್ನ ಅಧಿಕೃತ ಕರೆನ್ಸಿಗಳಲ್ಲೊಂದಾಗಿ ಗುರುತಿಸಿದ ಮೊದಲ ದೇಶ ಅನಿಸಿಕೊಂಡಿದೆ. ಇದು ಕ್ರಿಪ್ಟೋ ಹೂಡಿಕೆದಾರರಿಗೆ ಪಾಸಿಟಿವ್ ಸುದ್ದಿಯಾದ್ರೆ, ಮತ್ತೊಂದು ಕಡೆ ನೆಗೆಟಿವ್ ಬೆಳವಣಿಗೆಗಳೂ ಆಗ್ತಿವೆ. ಕಳೆದ ಕೆಲ ದಿನಗಳಿಂದ ಬಿಟ್ ಕಾಯಿನ್ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಇವತ್ತೂ ಕೂಡ ಭಾರೀ ಏರಿಳಿತ ಕಂಡುಬಂದಿದ್ದು, ಇದರ ಪರಿಣಾಮ ಎಥೇರಿಯಮ್ ಸೇರಿ ಉಳಿದ ಕ್ರಿಪ್ಟೋಗಳ ಬೆಲೆಯಲ್ಲೂ ಏರಿಳಿತ ಆಯ್ತು. 2020ರ ಜನವರಿಯಲ್ಲಿ ಒಂದು ಬಿಟ್ ಕಾಯಿನ್ ಗೆ ಏಳುವರೆ ಲಕ್ಷ ರೂಪಾಯಿ ಇತ್ತು. ನಂತರ ಇದ್ದಕ್ಕಿದ್ದಹಾಗೆ ಭಾರೀ ಏರಿಕೆ ಕಂಡುಬಂದು 2021ರ ಏಪ್ರಿಲ್ ನಲ್ಲಿ ಗರಿಷ್ಠ 48 ಲಕ್ಷದ ತನಕವೂ ಏರಿಕೆಯಾಗಿತ್ತು. ಆದ್ರೆ ಈಗ ಕಳೆದ 2-3 ತಿಂಗಳಿಂದ ಮತ್ತೆ ಬಿಟ್ ಕಾಯಿನ್ ಬೆಲೆ ಕುಸೀತಿದೆ. ಈಗ ಒಂದು ಕಾಯಿನ್​​​​ಗೆ 25 ಲಕ್ಷ ರೂಪಾಯಿ ಆಸುಪಾಸು ಇದೆ. ಅಮೆರಿಕದ ಫೆಡೆರಲ್ ಅಧಿಕಾರಿಗಳು ಹಾಕರ್ಸ್​​​​ಗೆ ಸೇರಿದ 23 ಲಕ್ಷ ಡಾಲರ್​​​​​ಗೂ ಅಧಿಕ ಬೆಲೆಬಾಳೋ ಬಿಟ್ ಕಾಯಿನ್ ಸೀಝ್ ಮಾಡಿದ್ದು, ಡೊನಾಲ್ಡ್ ಟ್ರಂಪ್ ಬಿಟ್ ಕಾಯಿನ್ ಒಂದು ಸ್ಕ್ಯಾಮ್, ಅದು ಅಮೆರಿಕನ್ ಡಾಲರ್ ವಿರುದ್ಧ ಕಾಂಪಿಟ್​​​ ಮಾಡ್ತಿದೆ ಅಂದಿದ್ದು, ಬಿಟ್ ಕಾಯಿನ್ ತಗೋತೀವಿ ಅಂದು ಆಮೇಲೆ ಎಲಾನ್ ಮಸ್ಕ್ ಉಲ್ಟಾ ಹೊಡೆದಿದ್ದು.., ಈ ಎಲ್ಲ ಸಂಗತಿಗಳು ಕ್ರಿಪ್ಟೋ ಲೋಕದಲ್ಲಿ ಕಳವಳಕ್ಕೆ ಕಾರಣ ಆಗಿದೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply