ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಡಲ್ಲ: ಯೂರೋಪಿಯನ್ ಯೂನಿಯನ್

masthmagaa.com:

ಯೂರೋಪಿಯನ್ ಕಮಿಷನ್​​ ತಾಲಿಬಾನಿಗಳಿಗೆ ಮಾನ್ಯತೆ ನೀಡೋದಿಲ್ಲ ಅಂತ ಹೇಳಿದೆ. ಯೂರೋಪಿಯನ್ ಕಮಿಷನ್​​ ಅಧ್ಯಕ್ಷೆ ಉರ್ಸುಲ ವೊನ್ ಡೆರ್ ಲೆಯೆನ್ ಮಾತನಾಡಿ, ನಾವು ತಾಲಿಬಾನಿಗಳಿಗೆ ಮಾನ್ಯತೆನೂ ನೀಡಲ್ಲ. ಉಗ್ರರೊಂದಿಗೆ ರಾಜಕೀಯ ಮಾತುಕತೆ ಕೂಡ ನಡೆಸೋದಿಲ್ಲ ಅಂತ ಹೇಳಿದ್ದಾರೆ. ಇನ್ನು ಚೀನಾ ತಾಲಿಬಾನ್​ಗಳನ್ನು ಮತ್ತಷ್ಟು ವಿಸ್ತರಿಸಲು ಯತ್ನಿಸ್ತಿದೆ ಅಂತ ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಹೇಳಿದ್ದಾರೆ. ತಾಲಿಬಾನಿಗಳ ರೀತಿಯೇ ತೈವಾನ್​ನ್ನು ವಶಕ್ಕೆ ಪಡೆಯಲು ಚೀನಾ ಕನಸು ಕಾಣ್ತಿದೆ. ಆದ್ರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಮರ್ಥರಿದ್ದೀವಿ ಅಂತ ಹೇಳಿದ್ಧಾರೆ. ಅಂದಹಾಗೆ ಇತ್ತೀಚೆಗೆ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದನ್ನು ಉದಾಹರಣೆಯಾಗಿ ನೀಡಿದ್ದ ಚೀನಾ, ಅಮೆರಿಕವನ್ನು ಜಾಸ್ತಿ ನಂಬಬೇಡಿ ಅಂತ ತೈವಾನ್​ಗೆ ಬುದ್ಧಿ ಹೇಳಿತ್ತು.

-masthmagaa.com

Contact Us for Advertisement

Leave a Reply