ಮತ್ತೆ ಕೊರೋನಾಗೆ ಕಂಗಾಲಾದ ಯೂರೋಪ್​! ಕೊರೋನಾ ಹೊಸ ದಾಖಲೆ

masthmagaa.com:
ಒಮೈಕ್ರಾನ್ ತುಂಬಾ ಸೀರಿಯಸ್ಸಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ ಯುನೈಟೆಡ್ ಕಿಂಗ್​ಡಮ್​​ನಲ್ಲಿ ಮೊಟ್ಟ ಮೊದಲಿಗೆ ಕೊರೋನಾ ಬಂದಾಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 78,610 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಹೈಯೆಸ್ಟ್ ಅಂದ್ರೆ ಕಳೆದ ಜನವರಿಯಲ್ಲಿ 68 ಸಾವಿರ ಮಂದಿಗೆ ಸೋಂಕು ಬಂದಿತ್ತು. ಆದ್ರೆ ಈಗ ಎಲ್ಲಾ ದಾಖಲೆಗಳನ್ನು ಮೀರಿದೆ ಕೊರೋನಾ.. ಯುನೈಟೆಡ್​​ ಕಿಂಗ್​ಡಮ್​​ನ ಒಟ್ಟು 6.7 ಕೋಟಿ ಜನಸಂಖ್ಯೆಯಲ್ಲಿ ಈಗಾಗಲೇ 1.1 ಕೋಟಿ ಜನರಿಗೆ ಕೊರೋನಾ ಬಂದಾಗಿದೆ. ಇತ್ತೀಚೆಗಷ್ಟೇ ಕೊರೋನಾದ ಒಮಿಕ್ರಾನ್ ತಳಿ ತುಂಬಾ ಸೀರಿಯಸ್ ಇದೆ. ದೊಡ್ಡ ಅಲೆಗೆ ಕಾರಣವಾಗಬಹುದು ಅಂತ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿದ್ರು. ತಜ್ಞರು ಕೂಡ ಕ್ರಿಸ್​​ಮಸ್​ ವೇಳೆಗೆ ಪ್ರತಿದಿನ ಲಕ್ಷಗಟ್ಲೆ ಕೇಸ್ ಪತ್ತೆಯಾಗ್ಬೋದು ಹುಷಾರು ಅಂತ ಎಚ್ಚರಿಸಿದ್ರು. ಅದ್ರ ಬೆನ್ನಲ್ಲೇ ಈಗ ಕೊರೋನಾ ಸಂಖ್ಯೆ ದೊಡ್ಡಮಟ್ಟದಲ್ಲಿ ಜಾಸ್ತಿಯಾಗೋಕೆ ಶುರುಗಿದೆ.

ಬರೀ ಯುನೈಟೆಡ್ ಕಿಂಗ್​​ಡಮ್ ಮಾತ್ರವಲ್ಲ.. ಇಡೀ ಯೂರೋಪ್ ಕಥೆ ಇದೇ ಆಗ್ತಿದೆ. ದಿನದಿಂದ ದಿನಕ್ಕೆ ಕೊರೋನಾ ಬಂದು ಆಸ್ಪತ್ರೆಗೆ ದಾಖಲಾಗೋರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಫ್ರಾನ್ಸ್​ನಲ್ಲಂತೂ ಆಸ್ಪತ್ರೆಗಳು ಭರ್ತಿಯಾಗ್ತಿದ್ದು, ಆರೋಗ್ಯ ಸಿಬ್ಬಂದಿ ಈಗಾಗಲೇ ರೆಸ್ಟ್​ಲೆಸ್​​ ಆಗಿ ಕೆಲಸ ಮಾಡೋ ಪರಿಸ್ಥಿತಿ ಬಂದಾಗಿದೆ.

ಯೂರೋಪಿಯನ್ ಯೂನಿಯನ್ ಮುಖ್ಯಸ್ಥೆ ಉರುಸುಲಾ ವೊನ್ ಡೆರ್ ಲೆಯೆನ್ ಮುಂದಿನ ತಿಂಗಳು ಯೂರೋಪ್​​ನಲ್ಲಿ ಕೊರೋನಾದ ಒಮೈಕ್ರಾನ್ ತಳಿ ಡಾಮಿನೆಂಟ್ ಆಗಲಿದೆ. ಅಂದ್ರೆ ಪತ್ತೆಯಾಗೋ ಪ್ರಕರಣಗಳಲ್ಲಿ ಹೆಚ್ಚು ಮಂದಿಗೆ ಇದೇ ಬರಲಿದೆ ಅಂತ ಎಚ್ಚರಿಸಿದ್ದಾರೆ.
-masthmagaa.com

Contact Us for Advertisement

Leave a Reply