ಡಿಕೆ ಶಿವಕುಮಾರ್‌ ಅವ್ರನ್ನ ಹೈಕಮಾಂಡ್‌ ಸಿಎಂ ಮಾಡಲ್ಲ! ಸಿದ್ದು ಹೇಳಿದ್ದೇನು?

masthmagaa.com:

ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ರೆ ಡಿಕೆ ಶಿವಕುಮಾರ್‌ ಅವ್ರನ್ನ ಹೈಕಮಾಂಡ್‌ ಸಿಎಂ ಮಾಡಲ್ಲ ಅಂತ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಅನ್ನೊ ಸುದ್ದಿ ಹರಿದಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಿಪಡಿಸಿರೊ ಸಿದ್ದರಾಮಯ್ಯ ನಾನು ಹಾಗೇ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನ ತಿರುಚಲಾಗಿದೆ ಎಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಎಂ ಆಯ್ಕೆ ಮಾಡ್ತೇವೆ ಅಂತ ನಾನು ಹೇಳಿದ್ದೇನೆ. ನಾನು ಆಕಾಂಕ್ಷಿ, ಡಿಕೆಶಿನೂ ಆಕಾಂಕ್ಷಿ ಅಂತ ಹೇಳಿದ್ದೇನೆ ಅಷ್ಟೇ. ಬೇರೆ ಏನು ಹೇಳಿಲ್ಲ. ಇದು ಶುದ್ಧ ಸುಳ್ಳು ಅಂತ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ಕೊಟ್ಟಿದ್ದಾಗ ಮಾತನಾಡಿದ್ದ ಸಿದ್ರಾಮಯ್ಯ. ನಾನೂ ಡಿಕೆಶಿ ಇಬ್ರೂ ಆಸ್ಪಿರೆಂಟ್…ಅದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಹೊಸದಾಗಿ ಎಲೆಕ್ಟ್‌ ಆಗೊ ಶಾಸಕರು ಅವರ ನಾಯಕರನ್ನ ಆಯ್ಕೆ ಮಾಡ್ತಾರೆ. ಹೈಕಮಾಂಡ್‌ ತನ್ನಷ್ಟಕ್ಕೆ ತಾನೇ ನಿರ್ಧಾರ ತೆಗೆದುಕೊಳ್ಳೋಕೆ ಆಗಲ್ಲ ಎಂದಿದ್ದಾರೆ. ಇನ್ನು ಕಾಂಗ್ರೆಸ್‌ ಕೂಡ ಈ ವರದಿಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದೆ. ಮಾದ್ಯಮಗಳು ಜನರ ನಂಬಿಕೆ ಉಳಿಸಿಕೊಳ್ಳಬೇಕು. NDTV ತಿರುಚಿದ ವರದಿ ಪ್ರಕಟಿಸಿದೆ. ಬಹುಶಃ ಅದಾನಿ ಎಫೆಕ್ಟ್ ಕಾರಣದಿಂದ ಇರಬಹುದು ಅಂತ ಹೇಳಿದೆ. ಅದಾನಿ ಎನ್‌ಡಿ ಟಿವಿಯಲ್ಲಿ ಶೇರು ಖರೀದಿ ಮಾಡಿದ್ದರಲ್ಲ ಅದನ್ನ ಗುರಿಯಾಗಿ ಇಟ್ಟುಕೊಂಡು ಕಾಂಗ್ರೆಸ್‌ ಈ ರೀತಿ ಹೇಳಿದೆ. ಇತ್ತ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ಇಲ್ದೇ ಇರೊ ಸೀಟಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಗುದ್ದಾಡ್ತಿದಾರೆ ಅಂತ ಸಿಎಂ ಬೊಮ್ಮಾಯಿ ಟೀಕಿಸಿದ್ದಾರೆ. ಜೊತೆಗೆ ಏಪ್ರಿಲ್‌ 8 ರಂದು ಬಿಡುಗಡೆ ಆಗಲಿರೊ ಅಭ್ಯರ್ಥಿಗಳ ಪಟ್ಟಿ ಸರ್ಪೈಸ್‌ ನೀಡಲಿದೆ. ಕೆಲವು ಕ್ಷೇತ್ರಗಳಿಗೆ ಆಶ್ವರ್ಯಕರ ಫಲಿತಾಂಶ ಇರಲಿದೆ ಎಂದಿದ್ದಾರೆ. ಇನ್ನು ಇವತ್ತು ಸೋಷಿಯಲ್‌ ಮೀಡಿಯಾದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತ ಕೆಲವು ನಕಲಿ ಪಟ್ಟಿಗಳು ವೈರಲ್‌ ಆಗಿತ್ತು , ಆದ್ರೆ ವೈರಲ್‌ ಆಗಿರೊ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಸುಳ್ಳು, ಏಪ್ರಿಲ್‌ 8 ರಂದು ಬಿಜೆಪಿ ತನ್ನ ಅಭ್ಯರ್ಥಿ ಪಟ್ಟಿ ರಿಲೀಸ್‌ ಮಾಡಲಿದೆ ಅಂತ ಪಕ್ಷ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply