ಸದ್ಯದಲ್ಲೇ ಕೋವಿಶೀಲ್ಡ್​​​, ಕೋವ್ಯಾಕ್ಸಿನ್​​ಗೆ ಸಂಪೂರ್ಣ ಅನುಮೋದನೆ?

masthmagaa.com:

ಭಾರತದಲ್ಲಿ ಅನುಮೋದನೆಗೊಂಡಿರೋ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್​ ಎರಡೂ ಲಸಿಕೆಗಳಿಗೂ ಮಾರ್ಕೆಟ್​ ಅಥರೈಸೇಷನ್​ ಅಥವಾ ಸಂಪೂರ್ಣ ಅನುಮೋದನೆ​ ನೀಡಬಹುದು ಅಂತ CDSCOನ ಸಬ್ಜೆಕ್ಟ್ ಎಕ್ಸ್​​ಪರ್ಟ್ ಕಮಿಟಿ ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಯ – ಡಿಸಿಜಿಐಗೆ ಶಿಫಾರಸು ಮಾಡಿದೆ. ಇಂಥಾ ಶಿಫಾರಸು ಬಂದಿದೆ ಅಂದ್ರೆ ಅದರರ್ಥ, Drugs and Cosmetic Act ಅಡಿಯಲ್ಲಿ ಹೊಸ ವ್ಯಾಕ್ಸಿನ್​ಗೆ ಏನೆಲ್ಲಾ ಹೈ ಸ್ಟಾಂಡರ್ಡ್​ ಸೇಫ್ಟಿ, ಎಫೆಕ್ಟಿವ್​ನೆಸ್​ ಮತ್ತು ಕ್ವಾಲಿಟಿ ಬೇಕೋ ಅದನ್ನ ಈ ಎರಡು ಲಸಿಕೆ ಮೀಟ್​ ಮಾಡಿವೆ ಅಂತ. ಈ ಶಿಫಾರಸ್ಸನ್ನ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೋದು ಡಿಸಿಜಿಐ.
ಸದ್ಯ ಈ ಲಸಿಕೆಗಳಿಗೆ DCGI ಕೊಟ್ಟಿರೋದು ಎಮರ್ಜೆನ್ಸಿ ಯೂಸ್​​ ಅಥರೈಸೇಷನ್ ಮಾತ್ರ. ಅಂದ್ರೆ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅರ್ಜೆಂಟ್​​ಗೆ ಅಂತ ನಿರ್ಬಂಧಿತ ಬಳಕೆಗೆ ಪರ್ಮಿಷನ್​ ಕೊಟ್ಟಿರೋದು. ಈ ಲಸಿಕೆಗಳ ಮೂರನೇ ಹಂತದ ಮಾನವ ಪ್ರಯೋಗದ ಆರಂಭಿಕ ಹಂತದಲ್ಲಾದ ಸಂಭಾವ್ಯ ಪ್ರಯೋಜನ ನೋಡಿಕೊಂಡು. ಲಸಿಕೆಯಿಂದ ಅಪಾಯಕ್ಕಿಂತ ಉಪಯೋಗವೇ ಹೆಚ್ಚು ಅನ್ನೋದನ್ನ ನೋಡಿ ಎಮರ್ಜೆನ್ಸಿ ಯೂಸ್​​ಗೆ ಅನುಮೋದನೆ ಕೊಟ್ಟಿರೋದು.

-masthmagaa.com

Contact Us for Advertisement

Leave a Reply