ಭಾರತದಲ್ಲಿ ಮಕ್ಕಳಿಗೆ ಯಾವಾಗ ಬರುತ್ತೆ ಲಸಿಕೆ..? ಶಾಲೆ ಶುರು ಯಾವಾಗ?

masthmagaa.com:

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನ ಮತ್ತೆ ಆರಂಭಿಸೋ ಬಗ್ಗೆ ಪರ-ವಿರೋಧ ಚರ್ಚೆ ನಡೀತಿದೆ. ಕೆಲವರು ಮಕ್ಕಳಿಗೂ ಕೊರೋನಾ ಲಸಿಕೆ ಬರ್ಲಿ, ಆಮೇಲೆ ಶಾಲೆ ಓಪನ್ ಮಾಡ್ಲಿ. ಲಸಿಕೆ ಹಾಕದೆ ಮಕ್ಕಳನ್ನ ಶಾಲೆಗೆ ಹೇಗೆ ಕಳಿಸೋದು ಅಂತ ಕೆಲ ಪೋಷಕರು ಹಿಂದೇಟು ಹಾಕ್ತಿದ್ದಾರೆ. ಈ ಸಂಬಂಧ ಇವತ್ತು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲ್ರಾಮ್ ಭಾರ್ಗವ ಮಹತ್ವದ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಅದೇನಂದ್ರೆ, ಸದ್ಯ ಜಗತ್ತಿನಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ಹಾಕ್ತಿರೋದು ಒಂದೇ ಒಂದು ದೇಶ. ಜೊತೆಗೆ ಸಣ್ಣ ಮಕ್ಕಳಿಗೆ ಕೊರೋನಾ ಲಸಿಕೆಯ ಅವಶ್ಯಕತೆ ಇದೆಯೇ ಅನ್ನೋದು ಕೂಡ ಒಂದು ಪ್ರಶ್ನೆಯಾಗಿದೆ. ಅಮೆರಿಕದಲ್ಲಿ ಲಸಿಕೆ ಪಡೆದ ಕೆಲ ಮಕ್ಕಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಮಕ್ಕಳ ಮೇಲೆ ಕೊರೋನಾ ಲಸಿಕೆ ಹೇಗೆ ಕೆಲಸ ಮಾಡುತ್ತೆ ಅನ್ನೋ ಬಗ್ಗೆ ಹೆಚ್ಚೆಚ್ಚು ಅಂಕಿಅಂಶಗಳು ಸಿಗೋವರೆಗೆ ಭಾರತದಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ಲಸಿಕೆ ಹಾಕೋದಿಲ್ಲ ಅಂತ ಬಲ್ರಾಮ್​ ಭಾರ್ಗವ ಹೇಳಿದ್ದಾರೆ. ಸೋ ಭಾರತದಲ್ಲಿ ಸದ್ಯಕ್ಕೆ 18 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ಹಾಕೋದಿಲ್ಲ ಅನ್ನೋದು ಇಲ್ಲಿ ಸ್ಪಷ್ಟ. ಆದಾಗ್ಯೂ, ನಾವು 2ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಸಣ್ಣ ಪ್ರಮಾಣದ ಅಧ್ಯಯನವನ್ನ ನಡೆಸುತ್ತಿದ್ದೇವೆ. ಅದರ ರಿಸಲ್ಟ್​ ಈ ವರ್ಷ ಸೆಪ್ಟೆಂಬರ್ ವೇಳೆಗೆ ಬರುವ ನಿರೀಕ್ಷೆ ಇದೆ ಎಂದಿದ್ದಾರೆ. ಜೊತೆಗೆ ಗರ್ಭಿಣಿಯರಿಗೂ ಕೊರೋನಾ ಲಸಿಕೆ ಹಾಕಬಹುದು. ಅದರಿಂದ ಗರ್ಭಿಣಿಯರಿಗೆ ಲಾಭವಾಗುತ್ತೆ ಅಂತ ಬಲ್ರಾಮ್ ಭಾರ್ಗವ ಹೇಳಿದ್ದಾರೆ. ಅಂದ್ಹಾಗೆ ಜಗತ್ತಿನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹಲವು ದೇಶಗಳು ಕೊರೋನಾ ಲಸಿಕೆ ಹಾಕ್ತಿವೆ. ಅಲ್ಲೆಲ್ಲಾ ಫೈಝರ್ ಲಸಿಕೆಯನ್ನ ಚುಚ್ಚಲಾಗ್ತಿದೆ. ಆದ್ರೆ 12ಕ್ಕಿಂತ ಕಮ್ಮಿ ವಯಸ್ಸಿನವರಿಗೆ ಲಸಿಕೆ ಹಾಕ್ತಿರೋದು ಚೀನಾ ಮಾತ್ರ. ಅಲ್ಲಿ 3 ವರ್ಷದಿಂದ 12 ವರ್ಷವರೆಗಿನ ಮಕ್ಕಳಿಗೆ ಕೊರೋನಾವ್ಯಾಕ್​ ಲಸಿಕೆಯನ್ನ ಹಾಕಲಾಗ್ತಿದೆ.

-masthmagaa.com

Contact Us for Advertisement

Leave a Reply